ಶಂಭುಲಿಂಗ ಶ್ರೀಗಳು ರಥೋತ್ಸವಕ್ಕೆ ಚಾಲನೆ
ಶಿಗ್ಗಾವಿ 11: ತಾಲೂಕಿನ ಹೋತನಹಳ್ಳಿಯಲ್ಲಿ ಪ್ಯಾಟಿ ಬಸವೇಶ್ವರ 44ನೇ ವರ್ಷದ ಭವ್ಯ ರಥೋತ್ಸವವು ಅದ್ದೂರಿಯಾಗಿ ಜರುಗಿತು.
ಹೋತನಹಳ್ಳಿಯ ಸಿಂದಗಿಮಠದ ಪಟ್ಟಾಧ್ಯಕ್ಷರು ಶಂಭುಲಿಂಗ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ಉಪಾಧ್ಯಕ್ಷ ಹನುಮಂತಗೌಡ ಪಾಟೀಲ ಹಾಗೂ ಸಮಿತಿ ಸದಸ್ಯರು, ಗ್ರಾಮದ ಮುಖಂಡರಾದ ಬಸಲಿಂಗಪ್ಪ ಮೂಡೂರು, ಬಸಪ್ಪ ಸವಣೂರ, ಧರ್ಮಣ್ಣ ಭಂಗಿ, ಶಿದ್ದಪ ಜಿಗಳಿ, ಪ್ರವೀಣ ಗೂಳಣ್ಣವರ, ಬಸನಗೌಡ ಕೆಮ್ಮಣಕೇರಿ, ರವಿ ಗೂಳಣ್ಣವರ, ವೀರಭದ್ರ್ಪ ಬೈಲವಾಳ, ಬಸಯ್ಯ ಈಳಿಗೇರ, ಹನಮಂತಪ್ಪ ಬಂಡಿವಡ್ಡರ ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು ಭಾಗಿಯಾಗಿದ್ದರು.