ಕುಸನಾಳ ಗ್ರಾ.ಪಂ. ಉಪಾಧ್ಯಕ್ಷರಾಗಿ ಶೈಲಾ ದುಗ್ಗೆ ಅವಿರೋಧ ಆಯ್ಕೆ
ಶೇಡಬಾಳ 15: ಕಾಗವಾಡ ತಾಲೂಕಿನ ಕುಸನಾಳ ಗ್ರಾಮ ಪಂಚಾಯತಿಗೆ ಇವತ್ತು ಉಪಾಧ್ಯಕ್ಷರ ಸ್ಥಾನಕ್ಕಾಗಿ ಚುನಾವಣೆ ಜರುಗಿತು.
ಚುನಾವಣೆಗೆ ಮೊಳವಾಡ ಗ್ರಾಮದ ವಾರ್ಡ್ ನಂ-05ರ ಚುನಾಯಿತ ಅಭ್ಯರ್ಥಿ ಶೈಲಾ ಪ್ರಕಾಶ ದುಗ್ಗೆ ನಾಮಪತ್ರ ಸಲ್ಲಿಸಿದ್ದರು. ವಿರೋಧವಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗ್ರಾ.ಪಂ. 14 ಜನ ಸದಸ್ಯರ ಸಮ್ಮುಖದಲ್ಲಿ ಶೈಲಾ ದುಗ್ಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಪ್ಪ ಮುಂಜೆ, ಸಹಾಯಕ ಚುನಾವಣಾಧಿ ಕಾರಿಯಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಯಶವಂತ ವಂಟಗೋಡಿ ಕಾರ್ಯ ನಿರ್ವಹಿಸಿದರು.
ನೂತನ ಉಪಾಧ್ಯಕ್ಷ ಶೈಲಾ ಪ್ರಕಾಶ ದುಗ್ಗೆ ಅವರನ್ನು ಸದಸ್ಯೆ ನಿರ್ಮಲಾ ಪಾಟೀಲ ಅವರು ಅಧಿಕಾರ ಹಸ್ತಾಂತರಿಸಿ ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷ ದೀಪಾ ಖನ್ನಿಕೋಡೆ, ಸದಸ್ಯರುಗಳಾದ ಸಂದೀಪ ಮಗದುಮ್, ಅಶೋಕ ನಾಂದಣಿ, ಚಿದಾನಂದ ಅಥಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಪಾಲ ಯರಂಡೋಳೆ, ಮಂಜುಳಾ ಕಾಂಬ್ಳೆ, ಮಹಾದೇವಿ ಭಾಸ್ಕರ್ ಹಳ್ಯಾಳ, ಸುಶೀಲ ಮಾಂಜರೆ, ಮಹಾದೇವ ಕಾಂಬ್ಳೆ, ರಾಣಿ ಗುರವ, ಮುಖಂಡರಾದ ಅಮೀತ ಪಾಟೀಲ, ವಿಜಯ ಖನ್ನಿಕೋಡೆ, ಭಾಸ್ಕರ್ ಹಳ್ಯಾಳ, ಪ್ರಕಾಶ ದುಗ್ಗೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಶವಂತ ವಂಟಗೋಡಿ, ಕಾರ್ಯದರ್ಶಿ ವೆಂಕಟೇಶ ಕುಲಕರ್ಣಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.