ಅಧ್ಯಕ್ಷರಾಗಿ ಶಾಹನವಾಜ ಆಯ್ಕೆ
ಇಂಡಿ. ಪಟ್ಟಣದ ಸರಕಾರಿ ಉರ್ದು ಪ್ರೌಢ ಶಾಲೆ( ಆರ್.ಎಂ.ಎಸ್.ಎ ) ಇಂಡಿಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶಾಹನವಾಜ ಅರಬ ಇವರನ್ನು ಆಯ್ಕೆ ಮಾಡಲಾಯಿತು.
ಶಾಲೆಯ ಮುಖ್ಯ ಗುರುಗಳು ಸೋಮನಾಥ ದೊಡ್ಡಿ ಮಾತನಾಡಿ, ಶಾಲಾಭಿವೃದ್ಧಿ ಹಾಗೂ ಮೇಲು ಉಸ್ತುವರಿ ಸಮಿತಿಯ ಜವಾಬ್ದಾರಿ ಮಹತ್ವದಾಗಿದೆ. ಶಾಲೆಯ ಸವಾಂರ್ಗೀಣ ಪ್ರಗತಿಗೆ ಸಲಹೆ ಮಾಹಿತಿ ನೀಡುವ ಮೂಲಕ ಮಕ್ಕಳ ಪೋಷಕರಾಗಿ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೇ ವಿದ್ಯಾರ್ಥಿಗಳ ಆಸಕ್ತಿಗೆ, ಅಭಿರುಚಿಗೆ ಸಾಮಾರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ಪ್ರೋತ್ಸಾಹಿಸಬೇಕಿದೆ ಎಂದರು.
ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ ಶಾಹನವಾಜ ಅರಬ ಮಾತನಾಡಿ, ಶಾಲಾಭಿವೃದ್ಧಿ ಮೇಲು ಉಸ್ತುವಾರಿ ಸಮಿತಿಯು ಶಾಲೆಯ ಮಕ್ಕಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.