ಮನರಂಜನೆ

ಎರಡು ವರ್ಷದ ಬಳಿಕ ಹೊಸ ಚಿತ್ರದಲ್ಲಿ ಶಾರೂಕ್ ಅಭಿನಯ

ಎರಡು ವರ್ಷದ ಬಳಿಕ ಹೊಸ ಚಿತ್ರದಲ್ಲಿ ಶಾರೂಕ್ ಅಭಿನಯ

ಮುಂಬೈ, ಸೆಪ್ಟೆಂಬರ್ 12: ಎರಡು ವರ್ಷದ ಬಳಿಕ ಹೊಸ ಸಿನಿಮಾವೊಂದರಲ್ಲಿ ಶಾರೂಕ್ ಖಾನ್ ನಟಿಸಲಿದ್ದಾರೆ. ಈ ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್‌ ನಿರ್ಮಿಸುತ್ತಿದ್ದು,  'ಪಠಾಣ್' ಎಂದು ಹೆಸರಿಡಲಾಗಿದೆ.

ಪಕ್ಕಾ ಆಕ್ಷನ್ ಚಿತ್ರ 'ಪಠಾಣ್' ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ಜಾನ್ ಅಬ್ರಹಾಂ ಖಳನಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರೀಕರಣ 2021 ರ ಜನವರಿಗೆ ಪ್ರಾರಂಭವಾಗುವ ಸಾಧ್ಯತೆಯಿದ್ದು,  2021 ರ ಅಂತ್ಯಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ. 

           ಚಿತ್ರಗಳು ಸಾಲು ಸಾಲು ಸೋಲು ಕಂಡ ಬಳಿಕ  ಶಾರೂಕ್ ಖಾನ್ ಸತತ ಎರಡು ವರ್ಷ ಸಿನಿಮಾದಿಂದ ಬಿಡುವು ಪಡೆದಿದ್ದರು. ಅವರ ನಟನೆಯ ಕೊನೆಯ ಸಿನಿಮಾ 'ಜೀರೋ' ಬಿಡುಗಡೆ ಆಗಿದ್ದು 2018 ರಲ್ಲಿ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿತು. ಆ ನಂತರ ಶಾರುಖ್ ಅವರ ಯಾವುದೇ ಸಿನಿಮಾ ಸೆಟ್ಟೇರಿರಲಿಲ್ಲ.

ಸುದ್ದಿ ಓದಿ