ಸೇವಾ ಪಾಕ್ಷಿಕ ಕಾರ್ಯಕ್ರಮ ಯಶಸ್ವಿಗೆ ಪಾರಶೆಟ್ಟಿ ಕರೆ
ಕಾಗವಾಡ 16: ದೇಶದ ಧೀಮಂತ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಸೆ.17 ರಿಂದ ಅ.7ರ ವರೆಗೆ ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಯಶಸ್ವಿಗೆ ಅನಿಯಾಗಬೇಕೆಂದು ಕಾಗವಾಡ ಬಿಜೆಪಿ ಮಂಡಲ ಅಧ್ಯಕ್ಷ ತಮ್ಮಣ್ಣಾ ಪಾರಶೆಟ್ಟಿ ಹೇಳಿದರು.
ಈ ಸೇವಾ ಪಾಕ್ಷಿಕ ಕಾರ್ಯಕ್ರಮದ ನಿಮಿತ್ಯ ಬುಧವಾರ ಐನಾಪುರ ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾಗವಾಡ ಬಿಜೆಪಿ ಮಂಡಲ ವ್ಯಾಪ್ತಿಯಲ್ಲಿ ಆಯಾ ದಿನದಂದು 16 ದಿನಗಳವರೆಗೆ ನೆರವೇರಿಸಲಾಗುವ ವಿವಿಧ ಸೇವಾ ಕಾರ್ಯಗಳ ಲಿಖಿತ ಪಟ್ಟಿಯನ್ನು ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ವಿತರಿಸಿ ಬಳಿಕ ಮಂಡಲದ ಅಧ್ಯಕ್ಷ ತಮ್ಮಣ್ಣಾ ಪಾರಶೆಟ್ಟಿ ಮಾತನಾಡಿ, ಬಿಜೆಪಿ ಹೈಕಮಾಂಡ್ ಈಗಾಗಲೇ ಸೇವಾ ಪಾಕ್ಷಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದೆ. ರಕ್ತದಾನ ಶಿಬಿರ, ವಿವಿಧ ರೋಗಗಳ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವಾರು ಸೇವಾ ಕಾರ್ಯಕ್ರಮಗಳನ್ನು 16 ದಿನಗಳ ಕಾಲ ನಿರಂತರ ನೆರವೆರಿಸಲಾಗುವುದು. ಪಕ್ಷದ ಎಲ್ಲ ಘಟಕಗಳ, ಶಕ್ತಿ ಕೆಂದ್ರಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾರ್ಯಕರ್ತರು ಈ ಸೇವಾ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.ಚಿಕ್ಕೋಡಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕೋಖಲೆ ಮಾತನಾಡಿ 16 ದಿನಗಳ ಸೇವಾ ಕಾರ್ಯಕ್ರಮಗಳ ವಿವರ ತಿಳಿಸಿದರು. ಕಾಗವಾಡ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯೋಗೇಶ್ ಕುಂಬಾರ್ ಮತ್ತು ಶಿವಾನಂದ ಗೊಲಬಾವಿ, ವಿಮಲ್ ಪಾಟೀಲ್ , ರಮೇಶ್ ಭೋಗಿ ಹಾಗೂ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿದ್ದರು.