ಧಾರವಾಡ - ಹುಬ್ಬಳ್ಳಿ

ಜಿಲ್ಲಾಡಳಿತದಿಂದ 77 ಪಿಯು ಕಾಲೇಜಗಳಲ್ಲಿ ಸರಣಿ ಉಪನ್ಯಾಸ ಆರಂಭ

ಜಿಲ್ಲಾಡಳಿತದಿಂದ 77 ಪಿಯು ಕಾಲೇಜಗಳಲ್ಲಿ ಸರಣಿ ಉಪನ್ಯಾಸ ಆರಂಭ

ಧಾರವಾಡ ,01: ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಹೋರಾಟದ ಸ್ಥಳಗಳು, ಹೋರಾಟದಲ್ಲಿ ಭಾಗವಹಿಸಿದ್ದ ಸಂಸ್ಥೆಗಳು ಮತ್ತು ರಾಷ್ಟ್ರೀಯ ಹೋರಾಟಗಳನ್ನು ನೆನಪಿಸಿ, ಧಶರವಾಡ ಜಿಲ್ಲೆಯ ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕುವ ಮತ್ತು ದಾಖಲಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ವಿವಿಧ ಇಲಾಖೆ, ಸಂಘ,ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್‌ 1 ರಿಂದ 15 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಭಂದಿಸಿದ ಅಧಿಕಾರಿಗಳು ಉತ್ಸಹ ಮತ್ತು ಹೆಮ್ಮೆಯಿಂದ ತೊಡಗಿಸಿಕೊಂಡು ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಸಂಘಟಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಅವರು ಇಂದು ಸಂಜೆ ಅಧಿಕಾರಿಗಳೊಂದಿಗೆ ಕಚೇರಿಯಲ್ಲಿ ಸಭೆ ಜರುಗಿಸಿ, ವಿವಿಧ ಕಾರ್ಯಕ್ರಮಗಳ ಸಿದ್ದತೆ ಪರೀಶೀಲಿಸಿ, ಮಾತನಾಡಿದರು. ಈ ವರ್ಷ ಧಾರವಾಡದಲ್ಲಿ ಸ್ವಾತಂತ್ರ್ಯೋತ್ಸವವನ್ನು ಯುವ ಸಮುದಾಯಕ್ಕೆ, ವಿದ್ಯಾರ್ಥಿಗಳಿಗೆ ಹೆಮ್ಮೆ, ಸ್ಪೂರ್ತಿ ತರುವ ರೀತಿಯಲ್ಲಿ ಆಚರಿಸಲಾಗುತ್ತಿದೆ. ನಾಳೆ ಆಗಸ್ಟ್‌ 1 ರಿಂದ ಸ್ವತಂತ್ರ್ಯೋತ್ಸವ ಕುರಿತು ಜಿಲ್ಲೆಯ ವಿವಿಧ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನಿರಂತರವಾಗಿ 77 ವಿಶೇಷ ಉಪನ್ಯಾಸಗಳು ಜರುಗಲಿವೆ.  

ಈ ಉಪನ್ಯಾಸ ಮಾಲಿಕೆಯಲ್ಲಿ ಇತಿಹಾಸ ಪ್ರಾಧ್ಯಾಪಕರು, ಇತಿಹಾಸ ತಜ್ಞರು ಮತ್ತು ಸಂಶೋಧಕರು ಭಾಗವಹಿಸಿ, ಯುವಕರಿಗೆ ವಿದ್ಯಾರ್ಥಿಗಳಿಗೆ ಜಿಲ್ಲೆಯ ಐತಿಹಾಸಿಕ ವ್ಯಕ್ತಿ, ಘಟನೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ತಂಡಗಳು ಕಾಲೇಜುಗಳ ಉಪನ್ಯಾಸ ಸಂದರ್ಭದಲ್ಲಿ ಲಾವಣಿ, ಗೀಗಿ ಹಾಗೂ ಜಾನಪದ ಹಾಡುಗಳ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕಟ್ಟಿಕೊಡಲಿದ್ದಾರೆ ಎಂದು ಅವರು ತಿಳಿಸಿದರು. ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.  

ಅವರೆಲ್ಲರಿಗೂ ಪಿಯು ಇಲಾಖೆಯಿಂದ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ ಎಂದು ಅವರು ಹೇಳಿದರು. *ಆಗಸ್ಟ್‌ 5 ರಿಂದ 14 ರ ವರೆಗೆ ಪುರಾತತ್ತ್ವ ಇಲಾಖೆಯಿಂದ ಛಾಯಚಿತ್ರ ಪ್ರದರ್ಶನ:* ಕೇಂದ್ರ ಪುರಾತತ್ತ್ವ ಇಲಾಖೆಯಿಂದ ನಗರದ ಆರ್ಟ ಗ್ಯಾಲರಿಯಲ್ಲಿ ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ಘಟನಾವಳಿಗಳು, ಉತ್ತರ ಕರ್ನಾಟಕದ ಹೋರಾಟಗಳ ಕುರಿತು ಆಗಸ್ಟ್‌ 5 ರಿಂದ 10 ರವೆಗೆ ಮತ್ತು ಹುಬ್ಬಳ್ಳಿ ಇಂದಿರಾ ಗ್ಲಾಸ್ ಹೌಸದಲ್ಲಿ ಆಗಸ್ಟ್‌ 12 ರಿಂದ 15 ರ ವರೆಗೆ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ, ಮಾಹಿತಿ ಪಡೆದಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.  

ಆಗಸ್ಟ 10 ರಂದು ಕವಿವಿ ಯಲ್ಲಿ ಇತಿಹಾಸ ವಿಚಾರ ಸಂಕಿರಣ:* ಕರ್ನಾಟಕ ವಿಶ್ವದ್ಯಾಲಯ, ಜಿಲ್ಲಾಡಳಿತ ಮತ್ತು ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ಆಶ್ರಯದಲ್ಲಿ ಧಾರವಾಡ ಜಿಲ್ಲೆಯ ಐತಿಹಾಸಿಕ ಅವಲೋಕನ ಕುರಿತು ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಸಂಶೋಧಕರು, ವಿದ್ವಾಂಸರು, ಪ್ರಾಧ್ಯಪಕರು ಮತ್ತು ಸಂಶೋಧನಾ ವಿದಗಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿವಿ ಕುಲಪತಿಗಳು, ವಿವಿಧ ವಿಭಾಗ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  

ಆಗಸ್ಟ 12 ರಂದು ಪತ್ರಗಾರ ಇಲಾಖೆಯಿಂದ ಐತಿಹಾಸಿಕ ದಾಖಲೆಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನ:* ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಗ್ಯಾಲರಿಯಲ್ಲಿ ಪ್ರಾದೇಶಿಕ ಪತ್ರಗಾರ ಇಲಾಖೆಯಿಂದ ಆಗಸ್ಟ್‌ 12 ರಿಂದ 15 ರವರೆಗೆ ಸ್ವಾತಂತ್ರ್ಯ ಚಳುವಳಿಯ ಕುರಿತಂತೆ ದಾಖಲೆ ಪತ್ರಗಳು ಹಾಗೂ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ಏರಿ​‍್ಡಸಲಾಗಿದೆ. ಸಾರ್ವಜನಿಕರಿಗೆ ಪ್ರದರ್ಶನದ ಮಾಹಿತಿ ನೀಡಲು ಗೈಡ್ ಗಳನ್ನು ಇಲಾಖೆಯಿಂದ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಆಗಸ್ಟ 13 ರಂದು ಹಬ್ಬಳ್ಳಿ ನಗರದಲ್ಲಿ ಪಾರಂಪರಿಕ ನಡಿಗೆ ಆಯೋಜನೆ. ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಹುಬ್ಬಳ್ಳ್ಳಿಯಲ್ಲಿ ಆಗಸ್ಟ್‌ 13 ರಂದು ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕರಿಂದ ಬೃಹತ್ ಪಾರಂಪರಿಕ ನಡಿಗೆಯನ್ನು ಸಂಘಟಿಸಲು ಉದ್ದೇಶಿಸಲಾಗಿದೆ. ಮಹಿಳಾ ವಿದ್ಯಾಪೀಠದಿಂದ ಬಾರ್ಡವೇ ರಸ್ತೆಯಲ್ಲಿರುವ ಹುತಾತ್ಮ ಯುವಕ ನಾರಾಯಣ ಅವರ ಸ್ಮಾರಕದವರೆಗೆ ಪಾರಂಪರಿಕ ನಡಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿವಿಧ ಜನಪ್ರತಿನಿಧಿಗಳಿಗೆ ಆಹ್ವಾನಿಸಲಾಗುವುದು. ಈ ಕುರಿತು ಸಿದ್ದತೆ ಮಾಡಿಕೊಳ್ಳಲು ಮಹಾನಗರಪಾಲಿಕೆ ಆಯುಕ್ತರಿಗೆ ಮತ್ತು ಹುಬ್ಬಳ್ಳಿ ತಹಶಿಲ್ದಾರ ಅವರಿಗೆ ಸೂಚಿಸಲಾಗಿದೆ ಎಙದು ಅವರು ತಿಳಿಸಿದರು. ಆಗಸ್ಟ 15 ರಂದು ರೂಪಕ, ರಂಗನಾಟಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ:* ಪ್ರತಿ ವರ್ಷದ ಪದ್ದತಿ ಜೊತೆಗೆ ಪ್ರಸಕ್ತ ವರ್ಷ ಮಕ್ಕಳಿಗೆ ಮಾರ್ಚ್‌ ಪಾಸ್ಟ್‌ ಸ್ಪರ್ಧೆ, ರೂಪಕ ಸ್ಪರ್ಧೆ, ವಿದ್ಯಾರ್ಥಿಗಳಿಂದ ಖಾದಿ ನೂಲು ತೆಗೆಯುವ ಕಾರ್ಯಕ್ರಮ, ಮಕ್ಕಳ ಜಾನಪದ ನೃತ್ಯ, ಜಾನಪದ ಹಾಡು, ಕಲಾವಿಧರಿಂದ ಜಾನಪದ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯ ಹಂಚಿಕೆ ಮಾಡಿರುವ ಇಲಾಖೆಗಳು ಉತ್ತಮ ರೀತಿಯಿಂದ ಕಾರ್ಯಕ್ರಮಗಳನ್ನು ಸಂಘಟಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ಹುಬ್ಬಳ್ಳಿ ಶಹರ ತಹಸಿಲ್ದಾರ ಕೆ.ಆರ್‌.ಪಾಟೀಲ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಪ್ರಾದೇಶಿಕ ಪತ್ರಗಾರ ಇಲಾಖೆ ಹಿರಿಯ ಸಹಶಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಿಕ್ಷಣ ಇಲಾಖೆ ಡಿವೈಪಿಸಿ ಎಸ್‌.ಎಂ.ಹುಡೆದಮನಿ, ಕೇಂದ್ರ ಪುರಾತತ್ತ್ವ ಇಲಾಖೆ ಅಧಿಕಾರಿ ಬಾಗಿ, ದೇವರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ