ಕಾಗವಾಡ

ಶೇಡಬಾಳದಲ್ಲಿ 6 ಅಂಗಡಿಗಳ ಬೀಗ್ ಮುರಿದು ಸರಣಿ ಕಳ್ಳತನ

ಶೇಡಬಾಳದಲ್ಲಿ 6 ಅಂಗಡಿಗಳ ಬೀಗ್ ಮುರಿದು ಸರಣಿ ಕಳ್ಳತನ
ಶೇಡಬಾಳ ಪಟ್ಟಣದಲ್ಲಿ ನಡೆದಿರುವ ಸರಣಿ ಕಳ್ಳತನದಲ್ಲಿ ಬಟ್ಟೆ ಹಾಗೂ ರಾಸಾಯಣಿಕ ಗೊಬ್ಬರ ಅಂಗಡಿಯಲ್ಲಿ ಪೊಲೀಸ್ ಅಧಿಕಾರಿಗಳು

ಕಾಗವಾಡ/ ಶೇಡಬಾಳ 19: ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಶೇಡಬಾಳ ಪಟ್ಟಣದ ಬಸ್ ನಿಲ್ದಾಣದ ಹತ್ತಿರಯಿರುವ ರಾಸಾಯಣಿಕ ಗೊಬ್ಬರ ಅಂಗಡಿ, ಮೊಬೈಲ್, ಟೈಯರ್, ಮದ್ಯದ ಅಂಗಡಿ ಹೀಗೆ 6 ಅಂಗಡಿಗಳ ಬೀಗ್ ಮುರಿದು ಸರಣಿ ಕಳ್ಳತನ ನಡೆದಿದೆ. 

ಭಾನುವಾರ ಹಾಗೂ ಸೋಮವಾರ ಮಧ್ಯರಾತ್ರಿಯಲ್ಲಿ ಕಳ್ಳತನ ನಡೆದಿದೆ. ಇಲ್ಲಿಯ ಕಿಸಾನ್ ಸೇವಾ ಕೇಂದ್ರದ ರಾಸಾಯಣಿಕ ಗೊಬ್ಬರ ಅಂಗಡಿಯ ಶಟರ್‌ನ್ನು ಕೆಬ್ಬಿನ ರಾಡ್ ಬಳಿಸಿ, ಅದನ್ನು ಮುರಿದು ಅಲ್ಲಿಗೆಯಿರುವ 40 ಸಾವಿರ ರೂ. ನಗದು ಹಣ ದೋಚಿಸಿಕೊಂಡಿದ್ದಾರೆ. ಇದೇ ರೀತಿ ಎರಡು ಮೊಬೈಲ್ ಅಂಗಡಿಗಳು, ಒಂದು ಟೈಯರ್ ಅಂಗಡಿ, ವೈನ್ ಶಾಪ್ ಹಾಗೂ ಬಟ್ಟೆ ಅಂಗಡಿ ಶಟರ್ ಕೆಬ್ಬಿನ ರಾಡಿನಿಂದ ಮುರಿದು ಕಳ್ಳತನ ಮಾಡಿದ್ದಾರೆ. ಅದರಲ್ಲಿ ಕೆಲ ಮೊಬೈಲ್‌ಗಳು, ಟೈಯರ್, ವೈನ್ ಶಾಪ್‌ನಲ್ಲಿಯ ಸೆರೆ ಬಾಟಲ್‌ಗಳು, ಬಟ್ಟೆ ಅಂಗಡಿಯಲ್ಲಿಯ ಬಟ್ಟೆಗಳು ಕಳ್ಳತನ ಮಾಡಿದ್ದಾರೆ. 

ಸೋಮವಾರ ಬೆಳಿಗ್ಗೆ ಯಥಾಸ್ಥಿತಿ ತಮ್ಮ ಅಂಗಡಿಗಳು ತೆರೆಯಲು ಬಂದಾಗ ಅಂಗಡಿ ಬಾಗಿಲುಗಳು ತೆರೆದಿದ್ದನ್ನು ಕಂಡು ಪಟ್ಟಣದಲ್ಲಿಯ ಕೆಲ ಹಿರಿಯರಿಗೆ ಈ ಮಾಹಿತಿ ನೀಡಿದರು. ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ತರಬೇತಿ ಪಿಎಸ್‌ಐ ಪ್ರವೀಣ ಬಿಳಗಿ ಹಾಗೂ ಎಎಸ್‌ಐ ರಜಕನ್ನವರ ಘಟಣಾಸ್ಥಳಕ್ಕೆ ಬಂದು, ನಡೆದ ಘಟಣೆ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. 

ಬಳಿಕ ಮಧ್ಯಾಹ್ನ ಬೆಳಗಾವಿಯಿಂದ ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ಬಂದು ಪರೀಶೀಲನೆ ಮಾಡಿದರು. ಶ್ವಾನದಳದವರು ಅಲ್ಲಿಗೆ ಬಿದ್ದಿರುವ ರಾಡ್‌ದ ವಾಸನೆ ಶ್ವಾನ್‌ಕ್ಕೆ ನೀಡಿದ ಬಳಿಕ ಕಾಗವಾಡ-ಶೇಡಬಾಳ ಮಾರ್ಗದ ಶಾಂತಿಸಾಗರ ಆಶ್ರಮದ ವರೆಗೆ ಹೋಗಿ ನಿಂತುಬಿಟ್ಟಿತ್ತು. ಕಳ್ಳರು ಕಳ್ಳತನ ಮಾಡಿ ಯಾವೋ ವಾಹನದ ಮುಖಾಂತರ ಇಲ್ಲಿಂದ ಕಾಲುಕಿತ್ತಿದ್ದಾರೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. 

ಕಿಸಾನ್ ಸೇವಾ ಕೇಂದ್ರದ ಸಂಚಾಲಕ ಕಿರಣ ಯಂದಗೌಡರ ಮಾಹಿತಿ ನೀಡುವಾಗ, ಶೇಡಬಾಳ ಪಟ್ಟಣದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸರಣಿ ಕಳ್ಳತನ ನಡೆದಿದ್ದು, ಈ ವರೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಈ ನಿಮಿತ್ಯ ಪ್ರಥಮ ಬಾರಿಗೆ ಆಗಮಿಸಿದ್ದಾರೆ. ಏಕಕಾಲಕ್ಕೆ 6 ಅಂಗಡಿಗಳ ಶಟರ್‌ಗಳು ರಾಡಿನಿಂದ ಮುರಿದು ಕಳ್ಳತನ ಮಾಡಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ವರೆಗೆ ನಗದು ಹಾಗೂ ಇನ್ನೀತರ ವಸ್ತುಗಳು ಕಳ್ಳತನವಾಗಿವೆ. ಸಿಸಿಟಿವಿ ಕ್ಯಾಮೆರಾದಲ್ಲಿ 5 ಜನ ಕಳ್ಳರು ಕಂಡುಬಂದಿದ್ದಾರೆ. ಶೇಡಬಾಳದ ಕಳ್ಳತನ ಕಾಗವಾಡ ಪೊಲೀಸ್‌ರು ತಪಾಸಣೆ ಮಾಡಿ ಕಳ್ಳರನ್ನು ಬಂಧಿಸಬೇಕೆಂದು ಅವರು ಕೇಳಿಕೊಂಡರು. 

ತರಬೇತಿ ಪಿಎಸ್‌ಐ ಪ್ರವೀಣ ಬಿಳಗಿ ಇವರು ಕಳ್ಳತನವಾಗಿರುವ ಅಂಗಡಿ ಮಾಲಿಕರಿಗೆ ಮತ್ತು ಇಲ್ಲಿಯ ಜನರಿಗೆ ಇಂಥಹ ಕಳ್ಳತನ ಮತ್ತೇ ನಡೆಯಬಾರದು, ಈ ಕಾರಣ ಪ್ರತಿಯೊಬ್ಬರು ನಿಗಾ ವಹಿಸಬೇಕು. ಅಲ್ಲದೇ, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಸಲಹೆ ನೀಡಿದರು. 

ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲವಾಗಿದ್ದು, ತರಬೇತಿ ಪಿಎಸ್‌ಐ ಪ್ರವೀಣ ಬಿಳಗಿ ಹಾಗೂ ಎಎಸ್‌ಐ ರಜಕನ್ನವರ ತನಿಖೆ ಕೈಗೊಂಡಿದ್ದಾರೆ. 

ಸುದ್ದಿ ಓದಿ