ಯರಗಟ್ಟಿ

ಯರಗಟ್ಟಿ ಪಟ್ಟಣದಲ್ಲಿ ಬ್ಯಾಂಕ್‌- ಅಂಗಡಿಗಳ ಸರಣಿಗಳ್ಳತನ ; ಆರೋಪಿಗಳು ಪರಾರಿ: ಸ್ಥಳಕ್ಕೆ ಮುರಗೋಡ ಪೊಲೀಸರ ಭೇಟೀನೀಡಿ ಪರೀಶೀಲನೆ

ಯರಗಟ್ಟಿ ಪಟ್ಟಣದಲ್ಲಿ ಬ್ಯಾಂಕ್‌- ಅಂಗಡಿಗಳ ಸರಣಿಗಳ್ಳತನ ; ಆರೋಪಿಗಳು ಪರಾರಿ: ಸ್ಥಳಕ್ಕೆ ಮುರಗೋಡ ಪೊಲೀಸರ ಭೇಟೀನೀಡಿ ಪರೀಶೀಲನೆ

ಲೋಕದರ್ಶನ ವರದಿ 


ಯರಗಟ್ಟಿ: ಪಟ್ಟಣದ ಆಝಾದ ವಿವಿಧ ಉದ್ದೇಶಗಳ ಸಹಕಾರಿ ಬ್ಯಾಂಕ್ ನಲ್ಲಿ ಕಳ್ಳತನ 

ಪಟ್ಟಣದಲ್ಲಿನ ಮತ್ತೋಂದು ಭಾಗವಾನ ದಿನಸಿ ಅಂಗಡಿ ಕಳ್ಳತನ ಶೆಟ್ಟರ್ ಮುರಿದು ಒಳನುಗ್ಗಿ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿ ಆರೋಪಿಗಳು ಪರಾರಿ 

ಬೆಳಿಗ್ಗೆ ಬ್ಯಾಂಕ್ ಓಪನ್ ಮಾಡಲು ಬಂದ ವೇಳೆ ಕಳ್ಳತನವಾಗಿರುವುದು ಬೆಳಕಿಗೆ 

ಬ್ಯಾಂಕ್ ನ ಕೆಲ ಚೆಕ್, ಹಣ ಹೊರಗಡೆ ಬೀಸಾಕಿರುವುದು ಪತ್ತೆ ಕಳ್ಳತನವಾದ ಸ್ಥಳಕ್ಕೆ ಮುರಗೋಡ ಪೊಲೀಸರ ಭೇಟೀನೀಡಿ ಪರೀಶೀಲನೆ ನಂತರ ಸ್ಥಳಕ್ಕೆ ಸ್ವಾನದಳ, ಬೆರಳಚ್ಚು ತಜ್ಞರನ್ನ ಕರೆಸಿ ತಪಾಸಣೆ ಮಾಡಲಾಯಿತು. 


ಕಳೆದ ಒಂದು ವಾರದಿಂದ ನಿರಂತರವಾಗಿ ಪಟ್ಟಣದಲ್ಲಿ  ಕಳ್ಳತನದಿಂದ ಬೆಚ್ಚಿಬಿದ್ದ ಯರಗಟ್ಟಿ ಪಟ್ಟಣದ ನಿವಾಸಿಗಳು ಕಳ್ಳತನ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. 


ಸ್ಥಳೀಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಇದುವರೆಗೆ ಕೆಲವು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಸ ಹೊರಹಾಕಿದ್ದಾರೆ. 


ನಂತರ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಯರಗಟ್ಟಿ ಎಲ್ಲಾ ವ್ಯಾಪಾರಸ್ಥರ ಹಾಗೂ ಸರ್ಕಾರಿ, ಅರೆ ಸರ್ಕಾರಿ ಬ್ಯಾಂಕಗಳ ಅಧಿಕಾರಿಗಳ ಸಭೆ ನಡೆಸಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಯಿತು. 


ಹೇಳಿಕೆ-1 


ಶೀಘ್ರದಲ್ಲೇ ಆರೋಪಿಗಳು ಪತ್ತೆ ಹಚ್ಚಿಲಾಗುವುದು ಹಾಗೂ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಗಸ್ತು ಹಾಕಲಾಗುವುದು. ಯರಗಟ್ಟಿಯಲ್ಲಿ ನಾಖಾಬಂದಿ ಮಾಡಲಾಗುವುದು. 

ಹೆಚ್ಚುವರಿ ಎಸ್‌.ಪಿ. ಮಹಾನಿಂಗ ನಂದಗಾವಿ 


ಸುದ್ದಿ ಓದಿ