ಮನರಂಜನೆ

ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ನಿಧನ

ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ನಿಧನ

ಬೆಂಗಳೂರು, ಸೆಪ್ಟೆಂಬರ್ 8: ಕಿರುತರೆ ಹಾಗೂ ಚಲನಚಿತ್ರ ರಂಗದ ಹಿರಿಯ ನಟ ಸಿದ್ದರಾಜು ಕಲ್ಯಾಣ್ಕರ್ ನಿಧನರಾಗಿದ್ದಾರೆ. ನಿನ್ನೆಯಷ್ಟೇ ತಮ್ಮ 60ನೇ ಜನ್ಮ ದಿನವನ್ನು ಆಚರಿಸಿಕೊಂಡಿದ್ದ ಕಲಾವಿದರು ತಡರಾತ್ರಿ 11.30ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಯಾರೇ ನೀ ಅಭಿಮಾನಿ, ಭೂಮಿ ಗೀತಾ, ಹೃದಯ ಹೃದಯ ಸೇರಿದಂತೆ ಹಲವಾರು ಚಲನ ಚಿತ್ರಗಳು ಹಾಗೂ 50ಕ್ಕೂ ಅಧಿಕ ಧಾರವಾಹಿಗಳಲ್ಲಿ ನಟಿಸಿದ್ದ ಸಿದ್ದರಾಜ್ ಅವರು ರಂಗಭೂಮಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.

ಸುದ್ದಿ ಓದಿ