ಧಾರವಾಡ - ಹುಬ್ಬಳ್ಳಿ

ನ.29 ರಂದು "ಕರ್ನಾಟಕ ಕ್ಷಾತ್ರ ಪರಂಪರೆ" ವಿಚಾರಗೋಷ್ಠಿ

ನ.29 ರಂದು  "ಕರ್ನಾಟಕ ಕ್ಷಾತ್ರ ಪರಂಪರೆ" ವಿಚಾರಗೋಷ್ಠಿ
ಆಹ್ವಾನ ಪತ್ರಿಕೆ

ಧಾರವಾಡ 28: ಬೆಂಗಳೂರು ಪರಮ್ ಹಿಸ್ಟರಿ ಸೆಂಟರ್, ಕರ್ನಾಟಕ ಇತಿಹಾಸ ಸಂಶೋಧನ ಮಂಡಳಿ ಹಾಗೂ ಕೆ. ಇ. ಬೋರ್ಡಿನ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ಸಹಯೋಗದೊಂದಿಗೆ, 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.29 ರಂದು ಕಾಲೇಜಿನ ಸಭಾಭವನದಲ್ಲಿ "ಕರ್ನಾಟಕ ಕ್ಷಾತ್ರ ಪರಂಪರೆ" ಎಂಬ ವಿಷಯದ ಮೇಲೆ ವಿಚಾರಗೋಷ್ಠಿ ಏರ್ಪಡಿಸಲಾಗಿದೆ.  

ಉದ್ಘಾಟಕರಾಗಿ ರಾಜ್ಯ ಇತಿಹಾಸ ಸಂಶೋಧನಾ ಮಂಡಳಿ ಗೌರವಾಧ್ಯಕ್ಷ ಗಿರಿಧರ ಎ ಕಿನ್ನಾಳ, ಮುಖ್ಯ ಅತಿಥಿಗಳಾಗಿ ಪರಮ್ ಸೆಂಟರ್ ಕಾರ್ಯಾಧ್ಯಕ್ಷ ಸಂತೋಷ ಬಿ. ಆರ್ ಆಗಮಿಸಲಿದ್ದಾರೆ.  ಹಿರಿಯ ಲೇಖಕ ಡಾ. ಶ್ಯಾಮಸುಂದರ ಬಿದರಕುಂದಿ, ಇತಿಹಾಸ ತಜ್ಞ ಡಾ. ಎಂ.ವೈ ಸಾವಂತ ಹಾಗೂ ಕವಿವಿ ಪ್ರಾಧ್ಯಾಪಕ ಡಾ. ಲೋಕೇಶ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಪ್ರೊ. ಎಂ ಸಿದ್ಧಾಂತಿ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಸುದ್ದಿ ಓದಿ