ಇಂಡಿ

ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿನಿ ರಾಣಿ ಆಯ್ಕೆ

ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿನಿ ರಾಣಿ ಆಯ್ಕೆ
ಇಂಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ನಿ ರಾಣಿ ಕುಂಬಾರ ಅವರಿಗೆ ಲಚ್ಯಾಣ ಗ್ರಾಮಸ್ಥರು ಮೆಡಲ್ ನೀಡಿ ಗೌರವಿಸಿದ

ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಇಂಡಿ ಪಟ್ಟಣದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಾಣಿ ಕುಂಬಾರ 73 ಕೆಜಿ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ವಿದ್ಯಾರ್ಥಿ ನಿಯನ್ನು ಶಾಲಾ ಆಡಳಿತಮಂಡಳಿಯವರು ಸತ್ಕರಿಸಿ ಗೌರವಿಸಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಹನುಮಂತ ಹದಗಲ್, ದೈಹಿಕ ಶಿಕ್ಷಕಿ ಆರತಿ ಚೌಹಾಣ, ತರಬೇತಿ ನೀಡಿದ್ದರು.

ಸನ್ಮಾನ ಸಮಾರಂಭದಲ್ಲಿ ಅಶೋಕ ಜಂಬಗಿ, ಆಂಜನೇಯ ಸ್ವಾಮಿ ಹೊಸಮನಿ, ಎ.ಓ. ಹೂಗಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಕಾಂತ ದೇವರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



ಸುದ್ದಿ ಓದಿ