ಅಥಣಿ

ನಾಡು, ನುಡಿ, ಜಲದ ರಕ್ಷಣೆಗಾಗಿ ಹೊಸ ಪದಾಧಿಕಾರಿಗಳ ಆಯ್ಕೆ: ರವಿ ಪೂಜಾರಿ

ನಾಡು, ನುಡಿ, ಜಲದ ರಕ್ಷಣೆಗಾಗಿ ಹೊಸ ಪದಾಧಿಕಾರಿಗಳ ಆಯ್ಕೆ: ರವಿ ಪೂಜಾರಿ

ಅಥಣಿ 31: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ)ಯ ಎಲ್ಲ ಪದಾಧಿಕಾರಿಗಳನ್ನು ರಾಜ್ಯ ಅಧ್ಯಕ್ಷ ಪ್ರವೀಣ ಶೆಟ್ಟಿ ವಜಾ ಮಾಡಿ ಆದೇಶ ಹೊರಡಿಸಿದ್ದರಿಂದ ನಾಡು, ನುಡಿ, ಜಲದ ರಕ್ಷಣೆಗಾಗಿ ಹೊಸ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ ಎಂದು ಉದ್ಯಮಿ, ಪ್ರವೀಣ ಶೆಟ್ಟಿ ಬಣದ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ  ರವಿ ಪೂಜಾರಿ ಹೇಳಿದರು.  

ಅವರು ಗಡಿ ಭಾಗದ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಎಂದು ಆಗ್ರಹಿಸಿ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮತ್ತು ನೂತನ ಪದಾಧಿಕಾರಿಗಳ ಪದಗೃಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನನ್ನನ್ನು ಟಿಕಿಸುವ ಭರದಲ್ಲಿ ಕನ್ನಡವನ್ನು ಟಿಕಿಸಿ, ಅಪಮಾನಿಸಿ ಕೆರಳಿಸಬೇಡಿ ಎಂದು ಕಿವಿ ಮಾತು ಹೇಳಿದರು. ಕನ್ನಡದ ನೆಲ, ಜಲ, ಭಾಷೆಯನ್ನು ಗೌರವದಿಂದ ಕಾಣುವ ಎಲ್ಲರನ್ನು ಗೌರವಿಸುವ ನಾನು ಕಾನೂನನ್ನು ಕೂಡ ಗೌರವಿಸುತ್ತೇನೆ ಎಂದ ಅವರು ಸಂಘಟನೆಗಾಗಿ ನಾನು ಎಂದಿಗೂ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿಲ್ಲ. ನನ್ನ ಆದಾಯದ ಕೆಲ ಭಾಗವನ್ನು ಕನ್ನಡದ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿರುವೆ ಆದರೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಅನೇಕರು ಇಂದು ನನ್ನನ್ನು ಟಿಕಿಸುತ್ತಿದ್ದಾರೆ ಎಂದರು. ಒಂದು ಹಂತದ ವರೆಗೆ ವಿರೋಧಿಗಳ ಟಿಕೆ ಸಹಿಸುತ್ತೇನೆ ಆದರೆ ನನ್ನನ್ನು ಟಿಕಿಸುವ ಭರದಲ್ಲಿ ನನ್ನ ಕನ್ನಡದ ಸೇವೆಯನ್ನು, ಕನ್ನಡದ ನಾಡು, ನುಡಿಯನ್ನು ಟಿಕಿಸಿದಲ್ಲಿ ನಾನು ಸುಮ್ನನಿರಲ್ಲ ಎಂದ ಅವರು ಇತ್ತೀಚಿಗೆ ಕಾವೇರಿ ಹೋರಾಟದ ಸಂದರ್ಭದಲ್ಲಿ ವಜಾಗೊಂಡ ಅಥಣಿ ಪದಾಧಿಕಾರಿಗಳು ಸಂಘಟಿಸಿದ ಹೋರಾಟದಲ್ಲಿ ಬೆರಳೆಣಿಕೆಯಷ್ಟು ಹೋರಾಟಗಾರರು ಭಾಗವಹಿಸಿದ್ದನ್ನು ಗಮನಿಸಿ ಗಂಭೀರವಾಗಿ ಪರಿಗಣಿಸಿದ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಪ್ರವೀಣ ಶೆಟ್ಟಿ ಹಳೆಯ ಪದಾಧಿಕಾರಿಗಳನ್ನು ವಜಾಗೊಳಿಸಿ ಆದೇಶಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.     

ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರ ಮಿಥೇಶ್ ಪಟ್ಟಣ ಮಾತನಾಡಿ, ರಕ್ಷಣಾ ವೇದಿಯ ಸಂಘಟನೆಯ ನೇತೃತ್ವ ವಹಿಸಿರುವ ಉದ್ಯಮಿ ರವಿ ಪೂಜಾರಿ ಮಾರ್ಗದರ್ಶನದಲ್ಲಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು. ರಕ್ಷಣಾ ವೇದಿಕೆಯ ರಾಜೇಂದ್ರ ಐಹೊಳೆ ಮಾತನಾಡಿ, ಕನ್ನಡದ ಬೆಳವಣಿಗೆಯನ್ನು ಸಹಿಸದ ಕೆಲವರು ಟಿಕಿಸುತ್ತಾರೆ ಆದರೆ ನಾವು ಕನ್ನಡವನ್ನು ಸಂಘಟಿಸುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡೋಣ ಎಂದರು. ಪ್ರವೀಣ ಶೆಟ್ಟಿ ಬಣದ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ದೀಪಕ ಬುರ್ಲಿ, ಮಹಿಳಾ ಯುವ ಘಟಕಕ್ಕೆ ಆಶಾ ಪಾಟೀಲ, ಮಹಿಳಾ ಘಟಕಕ್ಕೆ ಮಾಲಾ ಐಹೊಳೆ ಆಯ್ಕೆಯಾದರು. ಇದಕ್ಕೂ ಮುನ್ನ ಆರ್‌.ಎಸ್‌.ಪಿ ಕಛೇರಿಯಿಂದ ತಹಶೀಲ್ದಾರ ಕಛೇರಿ ವರೆಗೆ ದ್ವಿಚಕ್ರ ವಾಹನಗಳ ರ್ಯಾಲಿಯಲ್ಲಿ ರವಿ ಪೂಜಾರಿ ಆಗಮಿಸಿದರು.   

ಈ ಸಂದರ್ಭದಲ್ಲಿ ಪ್ರವೀಣ ನಾಯಿಕ, ಚಿದಾನಂದ ಶೇಗುಣಸಿ, ಮಲ್ಲು ಗುಂಜಿಗಾಂವಿ, ರಿಯಾ ಪೂಜಾರಿ, ಲಕ್ಷ್ಮಣ ವಹಿದಿ, ಪ್ರಕಾಶ ಹಿಡಕಲ್, ಆನಂದ ಹಳಿಂಗಳಿ, ರಮೇಶ ಪೂಜಾರಿ, ಅರ್ಜುನ ಮಗದುಮ್ ಸೇರಿದಂತೆ ಸಾವಿರಾರು ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ