ಕಾರ್ಮಿಕರ ಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ರಾಣೇಬೆನ್ನೂರು 13: ನಗರದಲ್ಲಿರುವ ಚೌಡೇಶ್ವರಿ ದೇವಿ ದೇವಸ್ಥಾನದ ಟೌನ್‌ಹಾಲ್‌ನಲ್ಲಿ ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ ಲೋಕೇಶ್ ನಾಯ್ಕ ಅವರ ನೇತೃತ್ವದಲ್ಲಿ ಆಯ್ಕೆ ಮಾಡಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ನಂತರ ಜಿಲ್ಲಾ ಪದಾಧಿಕಾರಿಗಳಾಗಿ ಆಯ್ಕೆ ಯಾಗಿರುವ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನಪ್ಪ ಕೊಪ್ಪದ, ಅಧ್ಯಕ್ಷರಾದ ಪರಶುರಾಮ್ ಕುರುವತ್ತಿ, ಉಪಾಧ್ಯಕ್ಷರಾದ ಮರಡೆಪ್ಪ ಚೇಳಗೆರ, ಖಜಾಂಸಿಯಾದ ಚಂದ್ರ್ಪ ಬಣಕಾರ ಇವರುಗಳಿಗೆ ಆದೇಶ ಪತ್ರ ಹಾಗೂ ಐಡಿ ಕಾರ್ಡ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಶೋಭಾ ಮುದೇನೂರು, ಕವಿತಾ ಲಮಾಣಿ, ಮಲ್ಲಿಕಾರ್ಜುನಯ್ಯ ಹನಗೋಡಿಮಠ, ರೇವಣಸಿದ್ದಪ್ಪ ಪಾಟೀಲ್ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು, ತಾಲೂಕ್ ಸಮಿತಿ ಪದಾಧಿಕಾರಿಗಳು, ನಗರ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಮಿಕರ ಬಂದುಗಳು ಉಪಸ್ಥಿತರಿದ್ದರು.