ಮೇಲುಸ್ತುವಾರಿ ಸಮಿತಿ ಸದಸ್ಯರ ಆಯ್ಕೆ
ಇಂಡಿ: ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚಿಸುವ ಕುರಿತು ಶನಿವಾರ ಪಾಲಕರ ಸಭೆ ಏರಿ್ಡಸಲಾಯಿತು.
ಸಭೆಯಲ್ಲಿ ಪಾಲಕರ ಅಭಿಪ್ರಾಯದ ಮೇರೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಸದಸ್ಯರನ್ನು ನಿಯಮಾನುಸಾರ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಮಚಂದ್ರ ಯಂಕಂಚಿ, ಉಪಾಧ್ಯಕ್ಷರಾಗಿ ರಾಣಿ ಬಡಿಗೇರ, ಸದಸ್ಯರಾಗಿ ಪ್ರದೀಪ ಮೂರಮನ್, ಗಂಗಪ್ಪ ಬೇಡರ, ಅಬ್ದುಲ್ಹಮೀದ್ ಬಾಗವಾನ, ವಿವೇಕಾನಂದ ಚೋರಗಿಮಠ, ನಾಗಪ್ಪ ಶಿರಶ್ಯಾಡ, ಲಕ್ಷ್ಮೀ ಬಾರಿಕಾಯಿ, ಆಶಾರಾಣಿ ಗೊರನಾಳ ಅವರನ್ನು ಆಯ್ಕೆ ಮಾಡಲಾಯಿತು ಎಂದು ಆದರ್ಶ ವಿದ್ಯಾಲಯದ ಪ್ರಕಟಣೆ ತಿಳಿಸಿದೆ,