ರಾಜ್ಯ ಮಟ್ಟದ ಮೌಂಟನ್ ಬೈಕ್ ಸೈಕ್ಲಿಂಗ್ ಕ್ರೀಡಾಪಟುಗಳ ಆಯ್ಕೆ
ಲೋಕದರ್ಶನ ವರದಿ,
ಜಮಖಂಡಿ 7: ನಗರದ ಜಂಬಗಿ ಬೈಪಾಸ್ ರಸ್ತೆಯಲ್ಲಿ ಇದೇ ಅ. 19 ಮತ್ತು 20 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮೌಂಟನ್ ಬೈಕ್ ಸೈಕ್ಲಿಂಗ್ ಕ್ರೀಡಾ ಪಟುಗಳ ಆಯ್ಕೆ ಮಾಡಲಾಯಿತು. ಜಿಲ್ಲೆಯ ಎಲ್ಲ ತಾಲೂಕಿನಿಂದ ಸೈಕ್ಲಿಂಗ್ ಕ್ರೀಡಾ ಪಟುಗಳು ಭಾಗವಹಿಸಿದ್ದು, ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ವೆಂಕಪ್ಪ ಎಂಟೆತ್ತು, ಶ್ರೀಶೈಲ್ ಕುರಣಿ,ವಿಠ್ಠಲ್ ಬುರ್ಜಿ, ಮುತ್ತಣ್ಣ ಮೇತ್ರಿ,ದುಂಡಪ್ಪ ಅಥಣಿ, ಬಸವರಾಜ ಗುಳೇದ ಹಾಗೂ ಜಿಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲೆಯಿಂದ 10 ಜನ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಆಕಾಶ ಅಪರಾಜಿ ಹೆಗಡೆ, ಕಾಸಪ್ಪ ಗಿರಮಲ್ ಮೇತ್ರಿ,ಮಲ್ಲಿಕಾರ್ಜುನ ಕೆಂಚಪ್ಪಗೊಳ, ಪ್ರಜ್ವಲ್ ಅರಹುನಸಿ, ವಿನಾಯಕ ಮಾದಪ್ಪಗೋಳ, ಬೀರಪ್ಪ ಸರಬಿ, ಮಂಜುನಾಥ ಇಂಗಳಗಿ, ಅರುಣ ಲಂಬಾಣಿ, ಬಸವರಾಜ ಮಡ್ಡಿ, ದಾನೇಶ ತೇಲಿ, ಆಕಾಶ ಮುತ್ತಪ್ಪ ಮೇತ್ರಿ ಇವರುಗಳು ಜಿಲ್ಲೆಯಿಂದ ಆಯ್ಕೆಗೊಂಡಿದ್ದಾರೆಂದು ಸಂಸ್ಥೆಯವರು ತಿಳಿಸಿದ್ದಾರೆ.