ಅಥಣಿ

ದರೂರ ವಿವಿಧೋದ್ದೇಶ ಕೃಷಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ದರೂರ ವಿವಿಧೋದ್ದೇಶ ಕೃಷಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಲೋಕದರ್ಶನ ವರದಿ

ಸಂಬರಗಿ 01: ದರೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಇವರ ನೇತೃತ್ವದಲ್ಲಿ ಅಧ್ಯಕ್ಷರಾಗಿ ಶಿವಗೌಡಾ ಅಣ್ಣಪ್ಪಾ ಬಸಗೌಡರ ಹಾಗೂ ಉಪಾಧ್ಯಕ್ಷರಾಗಿ ಸಿದಗೌಡಾ  ಭಿಮಗೌಡಾ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹರೀಶ ಕಾಂಬಳೆ ಮಾಹಿತಿ ನೀಡಿದರು.

ನೂತನ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಅಭಿಮಾನಿಗಳು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ನಿರ್ದೇಶಕ ರವಿಂದ್ರ ಕಲ್ಲೋಳಿ, ಶಶಿಕಾಂತ ಮಾಯಣ್ಣಾವರ, ಶ್ರೀಕಾಂತ ಅಸ್ಕಿ, ಸಂಜಯ ಮಧಭಾವಿ, ಕಸ್ತೂರಿ ರಾಮಗೌಡಾ ಗುಮತಾಜ, ಸುರೇಖಾ ಅಜಿತಕುಮಾರ ಸೌಂದತಿ, ಮಲ್ಲೇಶ ದಳವಾಯಿ, ಭೂಪಾಲ ಕಾಂಬಳೆ, ಅಶೋಕ ಖೆಮಲಾಪುರ, ಶಂಕರ ತರಗಿ ಹಾಗೂ ಮುಖಂಡರಾದ ಮಹೇಶ ಢವಳೇಶ್ವರ, ಮಹಾದೇವ ಬಸಗೌಡರ, ಜಗದೀಶ ದಳವಾಯಿ, ಗುರಲಿಂಗ ಗುಮತಾಜ, ಮಹೇಶ ಚೌಗಲಾ, ಬಸವರಾಜ ಮಠದ ಸೇರಿದಂತೆ ಇತರರಿದ್ದರು.ಸಹಾಯಕ ಚುನಾವಣೆ ಅಧಿಕಾರಿ ಅಶಾ ಬಿರಾದಾರ ಉಪಸ್ಥಿತರಿದ್ದರು 

ಸುದ್ದಿ ಓದಿ