ಗುಳೇಗುಡ್ಡ

ಮಾದರಿ ಶಾಲೆಗೆ ಅನುದಾನ ಸದ್ಭಳಕೆಯಗಲಿ : ಜಿಪಂ ಸಿಇಓ

ಮಾದರಿ ಶಾಲೆಗೆ ಅನುದಾನ ಸದ್ಭಳಕೆಯಗಲಿ : ಜಿಪಂ ಸಿಇಓ
ತಾಲೂಕಿನ ಹಂಗರಗಿ ಗ್ರಾಮದಲ್ಲಿ ಸಸಿಗೆ ನೀರುಣಿಸಿ ಯೋಜನೆಗೆ ಚಾಲನೆ ನೀಡಿದರು.

ಗುಳೇದಗುಡ್ಡ 15: ತಾಲೂಕಿಗೆ ಒಂದರಂತೆ ಮಾದರಿ ಪ್ರೌಢಶಾಲೆಗೆ ಆಯ್ಕೆ ಮಾಡುವ ಶಾಲೆಗಳಲ್ಲಿ ತಾಲೂಕಿನ ಹಂಗರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದ್ದೂ, ಶಾಲೆಯ ಸರ್ವಾಂಗೀಣ ಭೌತಿಕ ಅಭಿವೃದ್ಧಿಗಾಗಿ ಅನುದಾನ ಸದ್ಭಳಕೆಯಾಗಲಿ ಎಂದು ಬಾಗಲಕೋಟೆ ಜಿಪಂ ಸಿಇಓ ಟಿ.ಬೂಬಾಲನ್ ಹೇಳಿದರು. 

ಮಂಗಳವಾರ ಹಂಗರಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಎಂ. ನರೇಗಾ ಯೋಜನೆ ಅಡಿಯಲ್ಲಿ ತಾಲೂಕಿನ ಏಕೈಕ ಶಾಲೆಯಾಗಿ ಆಯ್ಕೆಯಾದ ಹಂಗರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಸಿಗೆ ನೀರುಣಿಸಿ  ಮಾತನಾಡಿ, ಯೋಜನೆಯ ಒಟ್ಟು ರೂ.17 ಲಕ್ಷ ಅನುದಾನವನ್ನು ಬಳಕೆ ಮಾಡಿ ಪ್ರೌಢಶಾಲೆಯನ್ನು ಮಾದರಿ ಶಾಲೆಯನ್ನಾಗಿ ನಿರ್ಮಿಸಬೇಕೆಂದು ಹೇಳಿದರು. 

ತಾಪಂ ಇಓ ಎಸ್‌.ಪಿ. ನಕ್ಕರಗುಂದಿ ಮಾತನಾಡುತ್ತಾ 17 ಲಕ್ಷ ರೂ.ದಲ್ಲಿ ಮಕ್ಕಳ ಡೈನಿಂಗ್ ಹಾಲ್ ನಿರ್ಮಾಣ,ಶಾಲೆಯ ಸುತ್ತಲೂ ಕಂಪೌಂಡ್, ಮಳೆ ನೀರು ಕೋಯ್ಲು, ಶೌಚಾಲಯ ನಿರ್ಮಾಣ, ಕೋಕೋ,ಕಬ್ಬಡ್ಡಿ, ವಾಲಿಬಾಲ್ ಆಟಗಳ ಕೋಟ್‌ಗಳ ನಿರ್ಮಾಣ, ಶಾಲೆಯ ಮೂಲ ದ್ವಾರದಿಂದ ಹಿಡಿದು ಶಾಲಾ ಕಟ್ಟಡದವರೆಗೆ ಫೆವರ​‍್ಸ‌  ಜೋಡಿಸುವ ಕಾಮಗಾರಿಗಳನ್ನು ಮಾಡಿಸಿ ಭೌತಿಕವಾಗಿ ಪ್ರೌಢಶಾಲೆಯನ್ನು ತಾಲೂಕಿನಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ  ಗ್ರಾಪಂ ಅಧ್ಯಕ್ಷೆ ಸೀತವ್ವ ಮಾದರ, ಗ್ರಾಮದ ಮುಖಂಡರಾದ ಪ್ರಕಾಶ ಮೇಟಿ, ಪ್ರಮೋದ ಕವಡಿಮಟ್ಟಿ, ಗ್ರಾಪಂ ಸದಸ್ಯ ಮಲ್ಲಪ್ಪ ಕುರಿ, ಫಕೀರ​‍್ಪ ಉಗಲವಾಟ, ಹಣಮಂತ ಬೆಳಗಲ್, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಗ್ರಾಪಂ ಪಿಡಿಓ ಹಾಗೂ ಎಡಿ ರಾಮಚಂದ್ರ ಮೈತ್ರಿ, ಶಾಲಾ ಮುಖ್ಯಶಿಕ್ಷಕ ಸಂಗಮ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. 


ಸುದ್ದಿ ಓದಿ