ರಾಣೆಬೆನ್ನೂರ

ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ರಾಣೇಬೆನ್ನೂರು 27: ತಾಲ್ಲೂಕಿನ ಸರಕಾರಿ ಉರ್ದು ಪ್ರೌಢ ಶಾಲೆ ಹಲಗೇರಿ ರಾಣೇಬೆನ್ನೂರು ತಾಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಅಲ್ಫೈನಾ ಮುಲ್ಲಾ  ಉರ್ದು ಭಾಷಣ ಹಾಗೂ ಗಜಲ್ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.  

ಸಾಂಸ್ಕೃತಿಕ ಸಾಧನೆ  ಮೆರೆದ ವಿದ್ಯಾರ್ಥಿನಿಗೆ  ಶಾಲೆಯ ಎಸ್‌ಡಿಎಮ್ ಅಧ್ಯಕ್ಷ ಇಸಾಕ್ ಮುಲ್ಲಾ  ಹಾಗೂ ಸರ್ವ ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಬೆನ್ನೂರ, ಸಹ  ಶಿಕ್ಷಕರಾದ ಇರ್ಷಾದ್ ಅಹ್ಮದ್ ಖಾಜಿ,  ರಿಯಾಜ್‌ಅಹ್ಮದ್ ಬಿಕ್ಬಾ,   ಮಿರ್ಜಾ ಐ  ಕೆ, ಜಗದೀಶ ಮಳಿಮಠ, ನಾಗಮ್ಮ ಹವಳೇರ, ಅಕ್ಕಮ್ಮ ಮತ್ತಿತರರು ಹಾರ್ದಿಕವಾಗಿ  ಅಭಿನಂದಿಸಿದ್ದಾರೆ. 


ಸುದ್ದಿ ಓದಿ