ಸೃಷ್ಟಿಗೆ ಪೂರಕವಾಗಿ ಬಾಳುವುದೇ ಸಂಸ್ಕೃತಿ: ಸೀಮಾ ಲೋಕೂರ
ಕಾಗವಾಡ 16: ನಿಸರ್ಗಚೇತನವಾದ ಭೂಮಿಯು ಒಂದು ಸುಸಂಸ್ಕೃತ ಸಂಪ್ರದಾಯವಾಗಿದೆ. ಭೂಮಿಯು ಗಾಳಿ, ಬೆಳಕು, ನೀರು, ಆಕಾಶ, ಮಣ್ಣು ಈ ಪಂಚಭೂತಗಳಿಂದ ನಿರ್ಮಾಣವಾಗಿದೆ. ಈ ಪಂಚಭೂತಗಳಿಂದಲೇ ಜೀವಜಂತುವಿನ ಸೃಷ್ಟಿಯಾಗಿದೆ. ಆದ್ದರಿಂದ ಈ ಸೃಷ್ಟಿಗೆ ಪೂರಕವಾಗಿ ಪ್ರೇರಕವಾಗಿ ಬದುಕಿ ಬಾಳುವುದೇ ಸಂಪ್ರದಾಯ ಮತ್ತು ಸಂಸ್ಕೃತಿಯಾಗಿದೆ ಎಂದು ಸೀಮಾ ಲೋಕೂರ ಹೇಳಿದರು.
ಉಗಾರ ಖುರ್ದದ ಪಿಪಲ್ ಎಜ್ಯುಕೇಶನ್ ಸೊಸಾಯಟಿ ಶಿಕ್ಷಣ ಸಂಸ್ಥೆಯ ಬಿಬಿಎ ಮತ್ತು ಬಿ.ಕಾಂ ಮಾವಿದ್ಯಾಲಯವು ಶನಿವಾರ ಆಚರಿಸಿದ “ಟ್ರೇಡಿಶನಲ್ ಡೇ” ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಕಿಲ್ಲೇದಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುವಾಗ, ಭಾರತವು ಒಂದು ಸಂಪ್ರದಾಯಬದ್ಧ ದೇಶವಾಗಿದೆ. ಶಾಂತಿ ಮತ್ತು ಐಕ್ಯತೆ ನಮ್ಮ ಸಂಸ್ಕೃತಿಯ ಮಂತ್ರವಾಗಿದೆ. ನಮ್ಮ ಪೂರ್ವಜರ ಆಚಾರ-ವಿಚಾರ, ನಡೆ-ನುಡಿ, ವೇಷ-ಭೂಷಣ, ತಿಂಡಿ-ತಿನಿಸು ಎಲ್ಲವೂ ಮೌಲ್ಯಯುತ ಸಂಪ್ರದಾಯಗಳಾಗಿದ್ದವು. ಪ್ರತಿಯೊಂದು ಆಚರಣೆಗೆ ವೈಜ್ಞಾನಿಕ ಹಿನ್ನಲೆಯಿತ್ತು. ಇಂದಿನ ಯುವ ಜನತೆ ಅದರ ಪಾಲಣೆ ಪೋಷಣೆ ಮಾಡಬೇಕು. ನಮ್ಮ ದೇಶದ ಸಂಸಕೃತಿಯ ಹಿರಿಮೆ ಗರಿಮೆಯ ವಾಹಕರಾಗಬೇಕು ಎಂದು ಹೇಳಿದರು.
ಸ್ಮೀತಾ ನಾಯಿಕ, ಸಂಸ್ಥೆಯ ಖಜಾಂಚಿ ಸುಭಾಷಿನಿ ಕಿಲ್ಲೇದಾರ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಜು ಧಡಧಡೆ, ವೈಶಾಲಿ ನಿಕ್ಕಮ, ದ್ರಾಕ್ಷಯಣಿ ಭೋಸಗಿ, ಸಪನಾ ಪಾಟೀಲ, ಮೇಘನಾ ಅನಗಲಿ, ಜ್ಯೋತಿ ವಾಘ್ಮೋಡೆ, ವಾಮನ ನಾಡಗೌಡರ, ಚನ್ನಪ್ಪಾ ಕರಿಗಾರ, ಕಿರಣ ಮೋರೆ, ಮೆಹಬೂಬ ಮೆಟಗಾರ, ಎಂ.ಬಿ.ಬಿಚ್ಚು ಮತ್ತು ಇತರರು ಉಪಸ್ಥಿತರಿದ್ದರು.