ಶಿಗ್ಗಾವ್

ರೈತರನ್ನು ಅಲೆದಾಡಿಸದೆ ಬೀಜ ಗೊಬ್ಬರ ವಿತರಿಸಬೇಕು : ಮ್ಯಾಗೇರಿ

ರೈತರನ್ನು ಅಲೆದಾಡಿಸದೆ ಬೀಜ ಗೊಬ್ಬರ ವಿತರಿಸಬೇಕು : ಮ್ಯಾಗೇರಿ

ಶಿಗ್ಗಾವಿ 24: ರೈತರಿಗೆ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಕೃಷಿ ಅಧಿಕಾರಿಗಳು ಕೂಡಲೇ ಬೀಜ ಗೊಬ್ಬರ ರೈತರಿಗೆ ತೊಂದರೆ ಆಗದಂತೆ ಅವರನ್ನು ಅಲೆದಾಡಿಸದೆ ಬೀಜ ಗೊಬ್ಬರ ವಿತರಿಸಲು ನಿಗಾ ವಹಿಸಬೇಕು ಎಂದು ಶಿಗ್ಗಾವಿ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.          

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ರಾಜ್ಯದ ರೈತರಿಗೆ ಬೀಜ ಗೊಬ್ಬರ ಕೊರತೆಯಾಗದಂತೆ ಕಾಳಜಿವಹಿಸಿದ್ದರು. ರಾಜ್ಯದ ರೈತರಿಗೆ ಬೀಜ ಗೊಬ್ಬರಕ್ಕೆಂದು ಭೂಸಿರಿ ಯೋಜನೆ ಮಾಡಿ ಹತ್ತು ಸಾವಿರ ರೂಪಾಯಿ ರೈತರ ಅಕೌಂಟಿಗೆ ಹಾಕಿದ್ದರು. ರೈತರಿಗೆ ಡೀಸೆಲ್ ಸಹಾಯಧನ, ರೈತ ಸನ್ಮಾನ ಯೋಜನೆ ಎಲ್ಲವುಗಳನ್ನು ಕೂಡ ಈ ಸರಕಾರ ಬಂದ ನಂತರ ರದ್ದುಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ರೈತರಿಗೆ ಮಾಡಿದ ಘೋರ ಮೋಸ ಎಂದರು.ಈ ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಗೋಳು ಕೇಳುವರು ಯಾರು ಇಲ್ಲ 

ರೈತರು ಬರಗಾಲದಿಂದ ಆರ್ಥಿಕ ಸಂಕಷ್ಟ ಅನುಭವಿಸಿ ಸಾಲದ ಸೂಲದಲ್ಲಿ ಸಿಲುಕಿದ್ದಾರೆ ಈಗ ಮತ್ತೆ ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿ ಬೆಳೆ ಬರುತ್ತದೆ ಮಳೆ ಬರುತ್ತದೆ ಎಂಬ ದೃಢವಾದ ನಂಬಿಕೆ ಇಟ್ಟು ಬಿತ್ತುತ್ತಾರೆ ಅಧಿಕಾರಗಳು ಮತ್ತು ಸರಕಾರ ಎಚ್ಚೆತ್ತುಕೊಂಡು ಪರಿಶುದ್ಧವಾದ ಬೀಜ ಅಂದರೆ ಕಳಪೆ ರಹಿತ ಬೀಜವನ್ನು ವಿತರಿಸಬೇಕು ಗೋವಿನ ಜೋಳ ಶೇಂಗಾ ಮತ್ತು ಸೋಯಾಬಿನ್  ಭತ್ತ ಬಿತ್ತಲು ಹಂಗಾಮು ಪ್ರಾರಂಭವಾಗಿದೆ ಶಿಗ್ಗಾವಿ, ಬಂಕಾಪುರ, ದುಂಡಶಿ ಹೋಬಳಿಗಳ ಕೃಷಿ ಸಂಪರ್ಕ ಕೇಂದ್ರದಲ್ಲಿ ಬೀಜ ಗೊಬ್ಬರ ಕೊರತೆಯಾಗದಂತೆ ಮತ್ತು ಕಾಳಸಂತಿಯಲ್ಲಿ ಮಾರಾಟವಾಗದಂತೆ ಸರಕಾರ ನಿಗದಿ ಪಡಿಸಿದ ಸಹಾಯಧನದ ದರದಲ್ಲಿ ರೈತರಿಗೆ ವಿತರಿಸುವಂತೆ ತಾಕೀತು ಮಾಡಬೇಕು. ಒಂದು ವೇಳೆ ಕಳಪೆ ಬೀಜದಿಂದ ಅನೇಕ ರೈತರು ಕಳೆದ ಸಾಲಿನಲ್ಲಿ ನಷ್ಟ ಅನುಭವಿಸಿದ್ದಾರೆ ಕಾರಣ ಬೀಜದ ಕಂಪನಿಗಳಿಗೆ ಖಡಕ್ ಸೂಚನೆ ನೀಡಿ ಒಂದು ವೇಳೆ ನೀವು ಕೊಟ್ಟ ಬೀಜ ರೈತರು ತಂದು ಬಿತ್ತಿ ಹುಟ್ಟದಿದ್ದರೆ ಒಟ್ಟು ಬೆಳೆದು ಬರುವ ಆದಾಯದ ದುಪ್ಪಟ್ಟು ಹಣ ಕೊಡಬೇಕಾಗುತ್ತದೆ ಎಂದು ನೋಟಿಸ್ ಜಾರಿ ಮಾಡಬೇಕು ಎಂದು ಹೆಚ್ಚಿನ ಧರಕ್ಕೆ ಮಾರಾಟವಾಗದಂತೆ ಸೂಚನೆ ನೀಡಬೇಕು ಎಂದರು. 


ಸುದ್ದಿ ಓದಿ