ಕಾಗವಾಡ

ದ್ವಿತೀಯ ಪಿಯುಸಿ ಪರೀಕ್ಷೆ : ಶಿವಾನಂದ ಪಪೂ ಮಹಾವಿದ್ಯಾಲಯಕ್ಕೆ ಶೇ. 90 ರಷ್ಟು ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆ : ಶಿವಾನಂದ ಪಪೂ ಮಹಾವಿದ್ಯಾಲಯಕ್ಕೆ ಶೇ. 90 ರಷ್ಟು ಫಲಿತಾಂಶ

ಶೇಡಬಾಳ 18: ಕಾಗವಾಡ ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯ 2021-22 ನೇ ಶೈಕ್ಷಣಿಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90 ರಷ್ಟು ಫಲಿತಾಂಶ ಬಂದಿದೆ.  

ಕಾಲೇಜಿನ ಒಟ್ಟು 425 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಇದರಲ್ಲಿ 381 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯ ವಿಭಾಗದ ಐಶ್ವರ್ಯ ಖೋತ  96.16.ಅ (577)  ಪ್ರತಿಶತ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೂ ವಿಜ್ಞಾನ ವಿಭಾಗದ ಕುಮಾರಿ. ಕಿರ್ತನಾ ಉಪ್ಪಾರ ಇವರು 95.33ಅ (572) ಹಾಗೂ ವಾಣಿಜ್ಯ ವಿಭಾಗದ ಸಂಧ್ಯಾ ಖೋಬರೆ 95.33(572) ಪ್ರತಿಶತ ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.  

ಕಲಾ ವಿಭಾಗದಲ್ಲಿ  ಕಾವ್ಯಾ ಅಸೋದೆ 95.00ಅ (570) ಅಂಕಪಡೆದು ಕಾಲೇಜಿಗೆ ತೃತೀಯ ಸ್ಥಾನಪಡೆದಿರುತ್ತಾರೆ. ಅದೇ ರೀತಿ ವೈಶಾಲಿ ಮಂಗಸೂಳೆ 94.83ಅ (569) ಅಂಕ ಪಡೆದು ಕಾಲೇಜಿಗೆ ನಾಲ್ಕನೆಯ ಸ್ಥಾನ ಪಡೆದಿರುತ್ತಾಳೆ.  

ವಾಣಿಜ್ಯ ವಿಭಾಗದ ವಿಠ್ಠಲ ಗುಗ್ಗರೆ 94.33ಅ (566), ವಿಜ್ಞಾನ ವಿಭಾಗದ ಕು. ಗೌರಿ ಬೆಳವಿ 94.16ಅ (565), ಕಲಾ ವಿಭಾಗದ ಐಶ್ವರ್ಯಾ ಬಡಚಿ 94ಅ (564) ಹಾಗೂ ವಿಜ್ಞಾನ ವಿಭಾಗದ ಸೃಷ್ಟಿ ಕಾಂಬಳೆ 93.16ಅ (559) ಅಂಕ ಪಡೆದು ಕ್ರಮವಾಗಿ ಐದು, ಆರು, ಏಳು ಹಾಗೂ ಎಂಟನೆಯ ಸ್ಥಾನ ಪಡೆದಿರುತ್ತಾರೆ. ವೈಯಕ್ತಿಕವಾಗಿ ಅಶ್ವಿನಿ ಮಾಕನ್ನವರ ಹಾಗೂ ವೈಶಾಲಿ ಮಂಗಸೂಳೆ ಶಿಕ್ಷಣಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿರುತ್ತಾರೆ. ಐಶ್ವರ್ಯಾ ಖೋತ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿರುತ್ತಾಳೆ. ಮಹಮ್ಮದಹರೀಶ ಸನದಿ ವ್ಯವಹಾರ ಅಧ್ಯಯನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿರುತ್ತಾನೆ. ವಿಠ್ಠಲ ಗುಗ್ಗರೆ ಮತ್ತು ಪೂಜಾ ಬಡಿಗೇರ ಲೆಕ್ಕಶಾಸ್ತ್ರದಲ್ಲಿ 100ಕ್ಕೆ 100 ಅಂಕ ಹಾಗೂ ಕೀರ್ತನಾ ಉಪ್ಪಾರ ಹಾಗೂ ಸೃಷ್ಟಿ ಕಾಂಬಳೆ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.  

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ