18ರವರೆಗೆ ಸೀಲ್ ಡೌನ್ ಮುಂದುವರಿಕೆ
ಘಟಪ್ರಭಾ 15: ಘಟಪ್ರಭಾ ಪಟ್ಟಣ ಮತ್ತು ಧುಪದಾಳ ಗ್ರಾಮದಲ್ಲಿ ನಾಳೆ ಅಂದರೆ ದಿ. 15. ರಿಂದ ದಿ.18 ರವರೆಗೆ ಸೀಲ್ ಡೌನ್ ಮುಂದುವರೆಸಲಾಗಿದ್ದು, ಎಂದು ತಹಶೀಲ್ದಾರ ಪ್ರಕಾಶ ಹೊಳಪ್ಪಗೊಳ ತಿಳಿಸಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದ 10ಗಂಟೆವರೆಗೂ ಹಾಗೂ ಸಂಜೆ 6 ಗಂಟೆಯಿಂದ 8ಗಂಟೆವರೆಗೂ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 10ಗಂಟೆವರೆಗೂ ಮೀನು ಮತ್ತು ಮಾಂಸ ವ್ಯಾಪಾರಕ್ಕೆ ಅನುಮತಿ ಇದೆ. ಹಾಗೂ ಕಿರಾಣಿ ಮತ್ತು ದಿನಸಿ ವ್ಯಾಪಾರದ ಸಂಬಂಧ ಹೋಂ ಡೆಲಿವರಿಗೆ ಮಾತ್ರ ಅವಕಾಶ ಇರುತ್ತದೆ. ಬೆಳಿಗ್ಗೆ 6ರಿಂದ ಸಂಜೆ 6ಗಂಟೆವರೆಗೂ ಒತ್ತುವ ಗಾಡಿಯಲ್ಲಿ ಕಾಯಿಪಲ್ಲೆ, ಹಣ್ಣು ವ್ಯಾಪಾರಕ್ಕೆ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ತುರ್ತು ವೈದ್ಯಕೀಯ ಸೇವೆಗಳು ನಿರಂತರವಾಗಿ ಇರಲಿದ್ದು, ಹೋಟೆಲ್ ಮತ್ತು ಖಾನಾವಳಿಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಇರುತ್ತದೆ.
ಸದರಿ ಅನುಮತಿಸಿದ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೆ, ಅಗತ್ಯವಲ್ಲದ ಸೇವೆಗಳಿಗೆ ಅವಕಾಶ ಇರುವುದಿಲ್ಲ. ಯಾವುದೇ ರೀತಿಯ ನಿಯಮಾವಳಿಗಳ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದಲ್ಲದೇ, ಕಾನೂನು ಕ್ರಮಕ್ಕೆ ಅವಕಾಶವಾಗುತ್ತದೆ ಎಂದು ತಿಳಿಸಿದ್ದಾರೆ
ವಾರಾಂತ್ಯ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಇದ್ದು, ಅಂದು ಹಾಲು ಮತ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಬೇರೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ ಎಂದು ಪ್ರಕಾಶ ಹೊಳಪ್ಪಗೊಳ ತಿಳಿಸಿದ್ದಾರೆ. 2