ಸಾಹಸ ಪ್ರವೃತ್ತಿಯಂತಹ ಗುಣಗಳನ್ನು ಬೆಳೆಸಲು ಸ್ಕೌಟ್ಸ್ ಗೈಡ್ ಸಹಕಾರಿ: ರಾಠೋಡ
ಇಂಡಿ: ಶಾಲಾ ಮಕ್ಕಳಲ್ಲಿ ಸ್ವಯಂಸೇವೆ, ಶಿಸ್ತು, ಸಜ್ಜನಿಕೆ, ಉತ್ತಮ ನಡೆ-ನುಡಿ, ಸೇವಾ ಮನೋಭಾವ, ಧೈರ್ಯ, ಸಾಹಸ ಪ್ರವೃತ್ತಿಯಂತಹ ಗುಣಗಳನ್ನು ಬೆಳೆಸಲು ಸ್ಕೌಟ್ಸ್ ಗೈಡ್ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಸೋಮವಾರ ಪಟ್ಟಣದ ಗುರುಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶಿಕ್ಷಕರ ಸಮಾವೇಶ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭವ್ಯ ಭಾರತದ ಆಸ್ತಿಗಳಾದ ವಿದ್ಯಾರ್ಥಿಗಳಿಗೆ ದೇಶಪ್ರೇಮ, ಪ್ರಕೃತಿ ಪ್ರೇಮ ಮತ್ತೆ ದಿಟ್ಟನಾಯಕತ್ವವನ್ನು ಮೂಡಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಸಹಕರಿಸಬೇಕು ಎಂದು ಹೇಳಿದರು.
ಸ್ಕೌಟ್ಸ್ ಸಂಸ್ಥೆಯ ತಾಲೂಕಾ ಅಧ್ಯಕ್ಷ ಡಾ. ಮಂಜುನಾಥ ಕೋಟೆನ್ನವರ ಮಾತನಾಡಿ, ಸ್ಕೌಟ್ಸ್ ಮತ್ತು ಗೈಟ್ಸ್ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಹೆಚ್ಚಾಗಬೇಕು. ಪರಿಸರ ಜಾಗೃತಿ ಸ್ವಚ್ಛೆತೆ ಮಹತ್ವದ್ದು. ಪರಿಸರ ಉಳಿಸಿ-ಬೆಳೆಸುವ ಕಾರ್ಯವನ್ನು ಮಕ್ಕಳಲ್ಲಿ ತುಂಬಬೇಕು ಎಂದರು.
ಸ್ಕೌಟ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಕುಂಬಾರ ಮಾತನಾಡಿ, ವಿಶ್ವ ಸಾಂಸ್ಕೃತಿಕ ಜಾಂಬೂರಿ. ದಳಗಳ ದತ್ತು ಯೋಜನೆ, ಆಂತರಿಕ ದಳ ಸಭೆ, ಪರಿಸರ ಗಣಪತಿ ಅಭಿಯಾನ, ದಳ ನಾಯಕರ ಉನ್ನತ ತರಬೇತಿ ಸೇರಿದಂತೆ ಅನೇಕ ವಿಷಯಗಳ ಕುರಿತು ತಿಳಿಸಿದರು.
ಸ್ಕೌಟ್ಸ್ ಮಾಸ್ಟರ್ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್. ನಡಗಡ್ಡಿ, ಎ.ಎಸ್. ಲಾಳಸೇರಿ, ರಮೇಶ ಕುಲಕರ್ಣಿ, ಎಸ್.ಎಸ್. ಸೋಲಾಪುರ, ಷಹಾಜಿ ಪಾಟೀಲ, ಭಾಗ್ಯಜ್ಯೋತಿ ಕೊಳಾರಿ, ದತ್ತಾತ್ರೇಯ ಕೊಳಾರಿ, ಸಂಗಮೇಶ ಬಂಡೆ, ರವಿಂದ್ರ ಆಳೂರ, ಬಿ.ವ್ಹಿ. ಹಿರೇಮಠ, ವೈ.ಜಿ. ಬಿರಾದಾರ ಬಸವರಾಜ ಗೋರನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.