ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಸೇವೆ ಶ್ಲಾಘನೀಯ: ಮುಂಜಿ
ಕಾಗವಾಡ 17: ಸೋಮವಾರ ಹಾಗೂ ಗುರುವಾರದಂದು ಜರುಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಗೊಳಿಸಲು ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಸ್ವಯಂ ಸೇವಕರು ಮುಂದೆ ಬಂದಿದ್ದು, ಸ್ವಯಂ ಸೇವಕರಿಗಾಗಿ ಮಾಸ್ಕ್, ಜ್ಯೂಸ್ ಹಾಗೂ ಬಿಸ್ಕಿಟ್ ವಿತರಿಸುವ ವ್ಯವಸ್ಥೆ ಕೈಗೊಂಡಿದ್ದಾರೆ. ಈ ಸಂಸ್ಥೆ ಸೇವೆ ಶ್ಲಾಘನೀಯವಾಗಿದೆಯೆಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಪ್ಪಾ ಮುಂಜಿ ಹೇಳಿದರು.
ಶನಿವಾರ ರಂದು ಕಾಗವಾಡದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಸ್ವಯಂ ಸೇವಕರು ಬಿಇಓ ಮಲ್ಲಪ್ಪಾ ಮುಂಜೆ ಇವರಿಗೆ ಮಾಸ್ಕ್, ಜ್ಯೂಸ್ ಹಾಗೂ ಬಿಸ್ಕಿಟ್ ನೀಡಿದರು. ಇದನ್ನು ಸ್ವೀಕರಿಸಿದ ಬಿಇಓ ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಸ್ವಯಂ ಸೇವಕರ ಕಾರ್ಯ ಶ್ಲಾಘಿಸಿದರು.
ಕಾಗವಾಡ ತಾಲೂಕಿನಲ್ಲಿ 9 ಕೇಂದ್ರಗಳಿದ್ದು, 2301 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸುಗಮವಾಗಿ ಬರೆಯಲು ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ.
ಆರ್.ಎಚ್.ಖಡಾಖಡಿ, ಕ್ಷೇತ್ರ ಸಮನ್ವಯಾಧಿಕಾರಿಗಳು ಸಿ.ಎಂ.ಸಾಂಗಲೆ, ದೈಹಿಕ ಶಿಕ್ಷಣ ಪರಿವಿಕ್ಷಕ ಎಸ್.ಬಿ.ಪಾಟೀಲ್, ಶಿಕ್ಷಣ ಸಂಯೋಜಕ ಸಿ.ಎಂ.ಸಂತೋಷ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ಕಾಂಬಳೆ, ಸ್ಥಳೀಯ ಸಂಸ್ಥೆ ಸ್ವಯಂ ಸೇವಕರಾದ ಪ್ರವೀನ ಕಲ್ಲೋಳ, ಎನ್.ಬಿ.ತಳವಾರ, ವ್ಹಿ.ಬಿ.ಖಂಡೇರಾಜುರೆ, ಆರ್.ಬಿ.ಲಂಗೋಟೆ, ಆರ್.ಎ.ಗಾಣಿಗೇರ, ಕಾವೇರಿ ಪಾಟೀಲ್ ಉಪಸ್ಥಿತರಿದ್ದರು.