ಕಾಗವಾಡ

ಸ್ಕೌಟ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ : ಸವದತ್ತಿ

ಸ್ಕೌಟ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ : ಸವದತ್ತಿ

ಕಾಗವಾಡ 22: ಶಿಸ್ತಿನ ಶಿಪಾಯಿರಾಗಿ ಬಾಳಬೇಕೆಂಬ ಉದ್ದೇಶದಿಂದ ಲಾರ್ಡ್ ಬೆಡೆನ್ ಪಾವೇಲ್ ಇವರು ನಿವೃತ್ತ ಹೊಂದ ನಂತರ ಮಕ್ಕಳನ್ನು ಒಂದುಗುಡಿಸಿ ಸ್ಕೌಟ್ ಆ್ಯಂಡ್ ಗೈಡ್ ಪ್ರಾರಂಭಿಸಿದ್ದರು. ಇದು ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗಧೀಶ ಸವದತ್ತಿ ಹೇಳಿದರು.

ಸೋಮವಾರ ರಂದು ಶೇಡಬಾಳದ ಸನ್ಮತಿ ಶಿಕ್ಷಣ ಸಂಸ್ಥೆಯಲ್ಲಿ ಸ್ಕೌಟ್ ಆ್ಯಂಡ್ ಗೈಡ್ ಸಂಸ್ಥಾಪಕ ಲಾರ್ಡ್ ಬೆಡೆನ್ ಪಾವೇಲ್ ಇವರ 164ನೇ ಜಯಂತಿ ಶಿಕ್ಷಣ ಸಂಸ್ಥೆಯಲ್ಲಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಜಗಧೀಶ ಸವದತ್ತಿ ಇವರು ಸಸಿಗೆ ನೀರು ಉನ್ನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯಾಧ್ಯಾಪಕರಾದ ಎಂ.ಎನ್.ಕಾಳೆನಟ್ಟಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸ್ಕೌಟ್ ಮಾಸ್ಟರ್ ಎಂ.ಕೆ.ಕಾಂಬಳೆ ಇವರಿಂದ ವಿದ್ಯಾರ್ಥಿಗಳಿಗೆ ನೀಡಿರುವ ವಿಶೇಷ ತರಬೇತಿ ಬಗ್ಗೆ ಪ್ರಶಂಸನೆ ಮಾಡಿದರು.

ಸ್ಕೌಟ್ ಮಾಸ್ಟರ್ ಎಂ.ಕೆ.ಕಾಂಬಳೆ ವಂದಿಸಿದರು. ಈ ವೇಳೆ ಸಂಚಾಲಕರಾದ ಅಜೀತ ಸವದತ್ತಿ, ಶಾಲೆಯ ಎಲ್ಲ ಶಿಕ್ಷಕರು, ಸಂಚಾಲಕರು, ಪಾಲಕರು ಪಾಲ್ಗೊಂಡಿದ್ದರು.

ಸುದ್ದಿ ಓದಿ