ಜ್ಞಾನ ವೃದ್ಧಿಗೆ ವಿಜ್ಞಾನ ಅನುಕೂಲ: ಎಸ್ ಬಿ ನಾಗಣೆ
ಇಂಡಿ 28: ವಿಜ್ಞಾನದ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯವಾಗಿದ್ದು, ಜ್ಞಾನ ವೃದ್ಧಿಸಿಕೊಳ್ಳಲು ಅನುಕೂಲವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಬದಲಾವಣೆಯಾಗಿದೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕಾದರೆ ಪ್ರತಿಯೊಬ್ಬರಿಗೂ ವಿಜ್ಞಾನದ ಜ್ಞಾನ ಅವಶ್ಯವಿದೆ. ವಿಜ್ಞಾನದ ಜ್ಞಾನದಿಂದ ಹೊಸ-ಹೊಸ ವಿಷಯಗಳ ಪ್ರಯೋಗಗಳು ಅರಿಯುವುದರ ಜತೆಗೆ ವ್ಯಕ್ತಿಯು ತನ್ನ ಜ್ಞಾನ ವದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಇಂಡಿ ತಾಲೂಕು ಝಳಕಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಎಸ್ ಬಿ ನಾಗಣೆ ಅವರು ಹೇಳಿದರು.ತಮ್ಮ ಶಾಲೆಯಲ್ಲಿ ನಡೆದ ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಂತರ ವಿಜ್ಞಾನ ಶಿಕ್ಷಕರಾದ ಎಚ್ ಆರ್ ಬೋಸಗಿ ಅವರು ವಿಜ್ಞಾನದ ಪ್ರಯೋಗಗಳನ್ನು ಸವಿಸ್ತಾರವಾಗಿ ಮಾಡುತ್ತಾ, ಮಕ್ಕಳಿಗೆ ತಿಳಿಸುತ್ತಾ ಮಾತನಾಡಿ,ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಜ್ಞಾನ ಶಿಕ್ಷಕರಾದ ಸುನೀಲ್ ಷಾ ಮಾತನಾಡಿ ಈ ವಿಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕುಮತ್ತುಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.ಈ ರೀತಿಯಾದ ವಿಜ್ಞಾನಿಗಳನ್ನು ತಯಾರಿಸುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಸಂಘಟಿಸಲಾಯಿತು ಎಂದು ಹೇಳಿದರು.
ಗ್ರಾಮ ಪಂಚಾಯತಿಯ ಸದಸ್ಯರಾದ ಹನುಮಂತ್ ಕೋಳಿ, ರವಿ ಹೂಗಾರ್ ರಾಘು ಕೆಂಗಾರ್ ,ಸುನಿಲ್ ಹೂಗಾರ ಶಿಕ್ಷಕರಾದ ಎಂ ಬಿ ಬಿರಾದಾರ,ಪಿ ಎಮ್ ಬನಗೊಂಡ, ಕೆ ಟಿ ಕಾತ್ರಾಳ, ಪಿ ಎಸ್ ನಂದರಗಿ, ಎ ಎಸ್ ಹರವಾಳ, ರೇಷ್ಮಾ ಗಜಕೋಶ, ಎಸ್ ಎಂ ಹಳಕಿ, ಆರ್ ಎಸ್ ವಾಂಗಿ, ಜೆ ಆರ್ ಅವದಿ, ಮಹೇಶ್ ಒಂಟಿಗಿಡದ ಅನೀಲ ಬಿರಾದಾರ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.