ಅಥಣಿ

ಅಕ್ಷರ ಕಲಿಸುವ ಶಾಲೆಗಳು ಮಕ್ಕಳಿಗೆ ದೇವಾಲಯವಿದ್ದಂತೆ: ಕುಮಠಳ್ಳಿ

ಅಕ್ಷರ ಕಲಿಸುವ ಶಾಲೆಗಳು ಮಕ್ಕಳಿಗೆ ದೇವಾಲಯವಿದ್ದಂತೆ: ಕುಮಠಳ್ಳಿ
ಶಾಸಕ ಮಹೇಶ ಕುಮಠಳ್ಳಿ ಗುಂಡದ ಲಕ್ಷ್ಮೀ ದೇವಸ್ಥಾನ ಆವರಣದಲ್ಲಿರುವ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಗಳನ್ನು ಉದ್

ಅಥಣಿ 18: ಅಕ್ಷರ ಕಲಿಸುವ ಶಾಲೆಗಳು ಮಕ್ಕಳ ಪಾಲಿಗೆ ದೇವಾಲಯ ಇದ್ದಂತೆ ಎಂದು ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಹೇಳಿದರು.  

ಅವರು ಅಥಣಿ ಗ್ರಾಮೀಣ ಪ್ರದೇಶದ ಗುಂಡದ ಲಕ್ಷ್ಮೀ ದೇವಾಸ್ಥಾನ ಆವರಣದಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ  ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  

ಮನೆಯೇ ಮೊದಲ ಪಾಠಶಾಲೆ ಮನೆಯಲ್ಲಿ ನಡಿಗೆ, ಮಾತು, ಊಟ ಮಾಡುವುದನ್ನು ಹಿಡಿದು ಮಗುವಿನ ದಿನನಿತ್ಯದ ಅವಶ್ಯಕತೆಗಳನ್ನು ಪಾಲಕರು ಮಗುವಿಗೆ ಕಲಿಸುತ್ತಾರೆ ಆದರೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಾಲೆಯೇ ಎಲ್ಲವನ್ನು ಕಲಿಸುತ್ತದೆ ಎಂದ ಅವರು  ಶಿಕ್ಷಕರ ಹಾವ, ಭಾವ, ಬಟ್ಟೆ, ಮಾತು ಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ ಹೀಗಾಗಿ ಶಾಲೆಯಲ್ಲಿರುವಷ್ಟು ಸಮಯ ಶಿಕ್ಷಕರು ತಮ್ಮನ್ನು ತಾವು ತಿದ್ದಿಕೊಂಡು ವಿದ್ಯಾರ್ಥಿಗಳಿಗೆ ಆದರ್ಶರಾಗಿರುವಂತೆ ಕರೆ ನೀಡಿದರು. 

ಮಾಜಿ ಜಿ.ಪಂ ಸದಸ್ಯ ಶಿವಾನಂದ ದಿವಾನಮಳ ಮಾತನಾಡಿ, ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಭೂ ಸೇನಾ ನಿಗಮಕ್ಕೆ ಒಪ್ಪಿಸಬೇಡಿ ಯಾಕೆಂದರೆ ಲ್ಯಾಂಡ್ ಆರ್ಮಿಯವರು ನಿರ್ಮಿಸುವ ಕೊಠಡಿಗಳು ಕಳಪೆ ಮಟ್ಟದಿಂದ ಕೂಡಿದ್ದು, ಶಾಲಾ ಕೊಠಡಿಗಳನ್ನು ಖಾಸಗಿ ಗುತ್ತಿಗೆದಾರರಿಗೆ ಒಪ್ಪಿಸಬೇಕು ಎಂದ ಅವರು ಶಾಸಕ ಹೇಶ ಕುಮಠಳ್ಳಿಯವರು ತಮ್ಮ ಅನುದಾನದಲ್ಲಿ 7 ಕೋಟಿ ರೂ.ಗಳಷ್ಟು ಹಣ ನೀಡಿದ್ದರಿಂದ  103 ಹೊಸ ಕೊಠಡಿಗಳ ನಿರ್ಮಾಣ, 250 ಶಾಲೆಗಳ ಕಟ್ಟಡಗಳ ರಿಪೇರಿ ಮಾಡಲಾಗಿದೆ ಎಂದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪಾ ಖೋತ ಮಾತನಾಡಿ, ಇಷ್ಟರಲ್ಲಿಯೇ ಸರಕಾರದ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಇದೇ 23 ರಿಂದ ಪ್ರೌಢ ಶಾಲೆಗಳು ಪ್ರಾರಂಭಗೊಳ್ಳಲಿವೆ ಎಂದ ಅವರು  ಶಾಸಕರ ಅಧಿಕಾರವಧಿಯಲ್ಲಿ ಶಾಲೆಗಳ ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದರು.  

ಗ್ರಾಮ ಪಂಚಾಯತ ಸದಸ್ಯರಾದ ಅರುಣ ಭಾಸಿಂಗಿ, ಪರಶುರಾಮ ಸೊಂದಕರ, ಧುರೀಣರಾದ ಅಪ್ಪಾಸಾಹೇಬ ಆಲಬಾಳ, ಶಿವಗೊಂಡ ಬಿಕ್ಕಾಣಿ, ವಿಜಯಕುಮಾರ ಪೂಜಾರಿ, ಶ್ರೀಶೈಲ ನಾಯಿಕ, ಶಿವರುದ್ದ ಘೂಳಪ್ಪನವರ, ಮಹಾದೇವ ಬಾಡಗಿ, ಸಿದರಾಯ ಬಜಂತ್ರಿ, ಕೇದಾರಿ ಮುಚ್ಚಂಡಿ, ಹಣಮಂತ ಬಜಂತ್ರಿ, ಸಂಜು ಬಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಸುದ್ದಿ ಓದಿ