ಕಾಗವಾಡ

ರಡ್ಡೇರಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ರಡ್ಡೇರಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಲೋಕದರ್ಶನ ವರದಿ 


 ಕಾಗವಾಡ 16: ಭಾರತವು ಪ್ರಜಾಪ್ರಭುತ್ವದ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢ, ಹಾಗೂ ಕಾಲೇಜು ಹಂತದಲ್ಲಿಯೇ ಮಕ್ಕಳಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸುವುದೇ ಚುನಾವಣೆಯ ಪ್ರಕ್ರೀಯೇ.  

  ಅದರ ಅಂಗವಾಗಿಯೇ ರಡ್ಡೇರಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪ್ರಧಾನಿ ಹಾಗೂ ಉಪ ಪ್ರಧಾನಿ ಹಾಗೂ ಮಂತ್ರಿಮಂಡಲ ರಚಿಸುವ ಯೋಜನೆಯಿದ್ದು, ಅಲ್ಲಿ ಮತದಾನದ ಪ್ರಕ್ರೀಯೇಗಳು ಹೇಗೆ ಜರಗುತ್ತವೆ ಎಂಬುದನ್ನು ಪ್ರಾತ್ಯಕ್ಷಿಕೆಯಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಚುನಾವಣೆ ನಡೆಸಿದರು. 

  ಮುಖ್ಯೋಪಾದ್ಯಾಯರಾದ ಭಾರತಿ ದೊಡಮನಿ ಅವರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಮಂಜುನಾಥ ಪಾಟೀಲ, ಬಸವರಾಜ ನಿಂಗವ್ವಗೋಳ, ಆಯೋಜಿಸಿದ್ದರು. ಮಹಾಂತೇಶ ಮಿರ್ಜಿ, ಎಂ.ಪಿ.ಚನಗೌಡರ, ಸುಧೀರ ಕುಲಕರ್ಣಿ, ಟಿ.ಎಸ್‌.ಬಾಗೆನ್ನವರ, ಎಚ್‌.ಎಸ್‌. ಹಳೋಳ್ಳಿ, ಡಾ.ಅರ್ಚನಾ ಅಥಣಿ ಜೆ.ಬಿ.ಪವಾರ ಚುನಾವಣಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಚುನಾವಣಾಧಿಕಾರಿಗಳಾಗಿ ವಿದ್ಯಾರ್ಥಿಗಳೇ ಕಾರ್ಯ ನಿರ್ವಹಿಸಿರುವುದು ವಿಶೇಷವಾಗಿತ್ತು.  

ವಿದ್ಯಾರ್ಥಿ ದಿಶೆಯಲ್ಲಿಯೇ ನಾಯಕಾರಾಗುವ ಗುಣ ಹಾಗೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ವಿಚಾರಗಳು ಅವರಿಗೆ ಮನವರಿಕೆಯಾಗಲು ಸಾಧ್ಯವಾಗುತ್ತದೆ. ಪ್ರತಿ ಶಾಲೆಯಲ್ಲಿಯೂ ಇಂಥಹ ಪ್ರಕ್ರೀಯೇಗಳು ಜರಗುವುದರ ಮೂಲಕ ಭವಿಷ್ಯತ್ತಿನ ಕನಸುಗಳನ್ನು ನನಸು ಮಾಡಿಕೊಳ್ಳುವ ಹಾಗೂ ರಾಜಕೀಯ ರಂಗದಲ್ಲಿ ತಾವೂ ಸಹ ಸಮಾಜ ಸೇವೆ ಮಾಡಬಲ್ಲರೆಂದು ತಿಳಿಸಿ ಕೊಡಲು ಇದು ವೇದಿಕೆಯಾಗಿದೆ. ಇಂಥಹ ವಿದ್ಯಾರ್ಥಿ ಚುನಾವಣೆಗಳು ಆಯಾ ಶಾಲಾ ಮಟ್ಟದಲ್ಲಿ ನಡೆಸುವದರಿಂದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು ಮೂಡುವುದರ ಜೊತೆಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡುತ್ತದೆ ಎನ್ನುತ್ತಾರೆ ಡಾ. ಅರ್ಚನಾ ಅಥಣಿ. 


ಸುದ್ದಿ ಓದಿ