ತುಂಗಭದ್ರಾ ಪ್ರೌಢಶಾಲೆ ಶಾಲಾ ಸಂಸತ್ ಅಸ್ತಿತ್ವಕ್ಕೆ
ಹೂವಿನ ಹಡಗಲಿ20: ಶಾಲೆಯ ಶೈಕ್ಷಣಿಕ ಪ್ರಗತಿಗೆ ನೂತನ ಮಂತ್ರಿ ಮಂಡಲ ಶ್ರಮಿಸಬೇಕು ಎಂದು ಸಂಚಾಲಕ ಆನಂದ್ ಜಿ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶನಿವಾರ 2024-25 ನೇ ಸಾಲಿನ ಡಾ ಬಿ ಆರ್ ಅಂಬೇಡ್ಕರ್ ಮತದಾರರ ಸಾಕ್ಷರತಾ ಕ್ಲಬ್ ನ ಶಾಲಾ ಸಂಸತ್ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ವಿವಿಧ ಇಲಾಖೆಗಳ ಸಚಿವರು ತಮಗೆ ನೀಡಿರುವ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸಿರಿ ಎಂದು ಹೇಳಿದರು.
ನೂತನ ಮಂತ್ರಿ ಮಂಡಲ ಪ್ರಧಾನಿ: ಎನ್ ಭೂಮಿಕಾ ಉಪ ಪ್ರಧಾನಿ: ಜಿ ತಸ್ಮಿಯಾ ಶಿಕ್ಷಣ ಮಂತ್ರಿ: ಎಸ್ ಲಾವಣ್ಯ ಆರೋಗ್ಯ: ಎಂ ರವಿಕುಮಾರ್ ಕನ್ನಡ ಸಂಸ್ಕೃತಿ, ಬಿ ಎಂ ಅನುಷ್ಕಾ ಆಹಾರ ಎಂ ಆರ್ ಸಾಗರ್ ಕ್ರೀಡೆ, ಅಶ್ವಿನಿ ಕಟಗಿ ಗ್ರಂಥಾಲಯ: ನಾಗರಾಜ ಹರಪನಹಳ್ಳಿ ವಿಜ್ಞಾನ ಮತ್ತು ತಂತ್ರಜ್ಞಾನ, ಎಸ್ ಮಾನಸ ವಾರ್ತಾ, ಎಂ ಆಯಿಷಾ ತೋಟಗಾರಿಕೆ: ಎನ್ ರಾಜು ಪ್ರವಾಸ, ಪೂಜಾರ ಪ್ರದೀಪ ಪರಿಸರ: ಸೊಪ್ಪಿನ ಪೂರ್ವಿ ಶಿಸ್ತು: ಕಮಾಟಿ ಗೌತಮ್ ಮುಖ್ಯ ಗುರುಗಳಾದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಬಸಪ್ಪ ಕೆ ಲಂಬಾಣಿ ಗಿಡ್ಡಾನಾಯ್ಕ್ ಗೀತಾ ಪಿ ಎಂ, ವೈ ಜಯಮ್ಮ ಪ್ರತಿಮಾ ಎನ್ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ,ರೇಖಾ ಎಸ್ , ಚಂದನಾ ಇತರರು ಉಪಸ್ಥಿತರಿದ್ದರು.ಕೆ ಕುಸುಮ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು.