ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ: ವಸಂತ ರಾಠೋಡ
ಇಂಡಿ 01: ಶಿಕ್ಷಣವು ಒಂದು ಸವಲತ್ತು ಅಲ್ಲ ಅದೊಂದು ಹಕ್ಕು. ಶಿಕ್ಷಣವು ಒಂದು ಶಕ್ತಿಯುತ ಸಾಧನವಾಗಿದ್ದು ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ.ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಬಡತನದಿಂದ ಮೇಲೆತ್ತಿ ಉತ್ತಮ ಪ್ರಜೆಯಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ತಾಲೂಕಿನ ಚವಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶಾಲಾ ಪ್ರಾರಂಭೋತ್ಸವ ಮತ್ತು ಮಕ್ಕಳ ದಾಖಲಾತಿ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಶಿಕ್ಷಕರು ಆನ್ಲೈನ್ ಶಿಕ್ಷಣದ ತಂತ್ರಜ್ಞಾನದ ಮೂಲಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು,ವಿಷಯ ಅಭಿವರ್ಧನೆ ಮಾಡುವುದು ಮತ್ತು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಸಬಲೀಕರಣಗೊಳಿಸುವ ಜ್ಞಾನದ ಉತ್ತಮ ಪ್ರಸಾರಕಾರರಾಗಿ ಹೆಚ್ಚು ಪ್ರಭಾವಿ ಮತ್ತು ಬಹುಮುಖಿ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.
ಬಿ ಆರ್ ಪಿ ಅಧಿಕಾರಿ ಅಲ್ಲಾಭಕ್ಷ ಚೌಧರಿ ಮಾತನಾಡುತ್ತಾ ದೂರದೃಷ್ಟಿ ಉದ್ದೇಶ ಹೊಂದಿರುವ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ದೇಶದಲ್ಲಿ ಸ್ಥಿತಿಸ್ಥಾಪಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಬಹುಮುಖಿ ತಂತ್ರಗಾರಿಕೆ ಇಂದಿನ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಹಂಜಗಿ ಕ್ಲಸ್ಟರ್ ಸಿ ಆರ್ ಪಿ ಈರಣ್ಣ ಕಂಬಾರ,ಚಿಕ್ಕ ಬೇವನೂರ ಸಿ ಆರ್ ಪಿ ದಾದಾ ಶ್ಯಾಮಣ್ಣವರ ವಾಟ್ಸಾಪ್ ಮೂಲಕ ಮಕ್ಕಳ ಕಲಿಕೆಗೆ ಪೂರಕವಾಗುವ ವಿಧಾನವನ್ನು ತಿಳಿಸಿದರು.
ಆಂದೋಲನದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ನೀಲಪ್ಪ ಬಿರಾದಾರ, ಸದಸ್ಯ ಕಾಮಣ್ಣ ದೊಡಮನಿ,ಶಿವುತೊಂಡಿಕಟ್ಟಿ,ಸದಾಶಿವ ಬಿರಾದಾರ,ಲಕ್ಷ್ಮಿ ಜೇವೂರ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ದಿಲ್ ಶಾದ್ ಚೌಧರಿ,ಪಿ ಡಿ ಓ ಅಧಿಕಾರಿ ಸಿ ಎಂ ಪಾರೆ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಎ ಎಸ್ ಬಡಿಗೇರ ಸ್ವಾಗತಿಸಿದರು.ಕೆ ಜಿ ಮೇತ್ರಿ ನಿರೂಪಿಸಿದರು.ಬಿ ಎಂ ವಠಾರ ವಂದಿಸಿದರು.