ಇಂಡಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ


ಇಂಡಿ: ರಾಜ್ಯದ ಎಲ್ಲಾ ಅಂಗವಿಕಲರಿಗೆ ಪ್ರತಿ ತಿಂಗಳು 6000 ಸಾವಿರ ಮಾಶಾಸನ ನೀಡಬೇಕು. ರಾಜ್ಯದ ವಿದ್ಯಾವಂತ ಅಂಗವಿಕಲರಿಗೆ ಉದ್ಯೋಗ ಕಲ್ಪಿಸಿ ಬದುಕು ರೂಪಿಸಿಕೊಳ್ಳುವಂತೆ ಪ್ರೇರೆಪಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕ ಅಧ್ಯಕ್ಷ ಎಸ್‌.ಎಮ್‌. ಮಕಾನದಾರ ಹೇಳಿದರು. 

ಅವರು ಬುಧವಾರ ಪಟ್ಟಣದ ಆಡಳಿತ ಸೌಧದ ಮುಂದೆ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಧರಣಿ ಸತ್ಯಾಗ್ರಹ ಉದ್ಧೇಶಿಸಿ ಮಾತನಾಡಿದ ಅವರು. 

ರಾಜ್ಯದಲ್ಲಿ ಸುಮಾರು 20 ಲಕ್ಷ ಜನ ಅಂಗವಿಕಲರು ಇದ್ದರು. 2022-23ನೇ ಸಾಲಿನ ಬಜೆಟನಲ್ಲಿ ಅಂಗವಿಕಲರಿಗೆ ಯಾವುದೇ ಹೊಸ ಸೌಲಭ್ಯಗಳನ್ನು ಘೋಷಣೆ ಮಾಡಿಲ್ಲ. ಅಂಗವಿಕಲರಿಗೆ ರಾಜ್ಯ ಸರಕಾರ ಕಡಗಣಿಸಿದೆ. ಇಂದಿನ ದುಬಾರಿ ಕಾಲದಲ್ಲಿ ಅಂಗವಿಕಲರಿಗೆ ಜೀವನ ಸಾಗಿಸುವುದು ತುಂಬಾ ಕಷ್ಟದಾಕದ ವಿಷಯ. ರಾಜ್ಯ ಸರ್ಕಾರ ಕೂಡಲೆ ಅಂಗವಿಕಲರಿಗೆ ಮಾಶಾಸನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದರು. 

ಶಿವಲಿಂಗಪ್ಪ ನಾಯ್ಕೋಡಿ ಮಾತನಾಡಿ, ದಿವಾಂಗ್ಯ ಕಲ್ಯಾಣ ಶೀರ್ಷಿಕೆಯಡಿಯಲ್ಲಿ ಮಾಶಿಕ ಪಿಂಚಣಿ 3000 ಸಾವಿರ ನೀಡಬೇಕು, ಹರಿಯಾಣ ಸರಕಾರದ ಮಾದರಿಯಲ್ಲಿ ಅಂಗವಿಕಲರಿಗೆ ವಿವಿದ ಇಲಾಖೆಯಲ್ಲಿರುವ ಹುದ್ದೇಗಳನ್ನು ನೇಮಕ ಮಾಡಬೇಕು, ಅಂಗವಿಕಲರ ವ್ಯಕ್ತಿಗಳ ಗೃಹ ತೆರಿಗೆ ವಿನಾಯತಿ ನೀಡಬೇಕು, 40 ಯುನಿಟಗಳ ವಿದ್ಯುತ್ ಉಚಿತವಾಗಿ ನೀಡಬೇಕು, ಪೆಟ್ರೋಲ್, ಡೀಸೆಲ್ ಸಬ್ಸಿಡಿ ಶೇ 50ಅ ರಿಯಾಯತಿ ದರದಲ್ಲಿ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಕೂಡಲೇ ಅನುಷ್ಠಾನಗೊಳಿಸಬೇಕೆಂದು ಸರಕಾರಕ್ಕೆ ಒತ್ತಾಯಸಿದ್ದರು. 

ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡಾದೆ ಮೂಲಕ ಮನವಿ ಸಲ್ಲಿಸಲಾಯಿತು. 

ಪ್ರತಿಭಟನಾಕಾರರ ಉದೇಶಿಸಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ, ಶ್ರೀಶೈಲಗೌಡ ಪಾಟೀಲ ಮತನಾಡಿದರು.  

ನಿಂಗರಾಜ ಬಿಸನಾಳ, ಸುಮಯ್ಯ ಮೊಮಿನ, ಬಾಬು ಸಂಗೋಗಿ, ನೂರಹ್ಮದ ಪಟಾಣ, ಭರಮಣ್ಣ ಪೂಜಾರಿ, ಬಸವರಾಜ ಸೊನ್ನ, ಸಿದ್ದು ಗುಲೆ, ರೇಖಾ ಕ್ಷತ್ರಿ, ಸೀತಾ ಪೂಜಾರಿ, ಪಾಂಡು ರಾಠೋಡ, ಕನ್ನಯಸಿಂಗ್ ಹಜಾರೆ, ಶಿವಾನಂದ ಎಳಗಿ, ಈರಣ್ಣ ಡಂಗಿ, ಬಾಬುಶ್ಯಾ ಹೊಸಮನಿ, ಲಕ್ಷ್ಮಣ ಚವ್ಹಾಣ, ವಿಲಾಸ ಶಿವಶರಣ, ನಿಲಾಬಾಯಿ ಕಟ್ಟಿಮನಿ, ಮಹಿಬೂಬ ಅಶ್ಟೇಕರ, ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ರಾಜು ಮುಲ್ಲಾ, ಬಾಬು ಮೇತ್ರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು. 


ಸುದ್ದಿ ಓದಿ