ಸತ್ಸಂಗದಿಂದ ಮನುಷ್ಯನ ಬದುಕು ಸಾರ್ಥಕ: ಸ್ವಾಮೀಜಿ
ಹೂವಿನಹಡಗಲಿ. ’ಸತ್ತಂಗ. ಸದ್ವಿಚಾರಗಳು ಮನುಷ್ಯನನ್ನು ಬದುಕಿನ ದಡ ಸೇರಿಸುತ್ತವೆ. ಯಾವಾಗಲೂ , ಒಳ್ಳೆಯವರ ಸಹವಾಸ ಮಾಡಬೇಕು. ಒಳ್ಳೆಯ ವಿಚಾರಗಳನ್ನು ಆಲಿಸಬೇಕು’ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹೊಳಗುಂದಿಯಲ್ಲಿ ಬುಧವಾರ ವಿಘ್ನೇಶ್ವರ ಯುವಕ ಸಂಘದ 50ನೇ ವರ್ಷದ ಗಣೇಶೋತ್ಸವ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.’ನಿಸರ್ಗದ ಪಯಣದಲ್ಲಿ ಹುಟ್ಟು ಸಾವುಗಳ ಮಧ್ಯೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಇಂದ್ರಿಯಗಳ ಅನುಭವಗಳು - ವಿಭಿನ್ನವಾಗಿದ್ದರೂ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು. ಶರಣರು, ಸಂತರು, ಮಹಾಂತರು ನುಡಿದಂತೆ ನಡೆದಿದ್ದಾರೆ. ಅವರ ಸಂದೇಶಗಳನ್ನು ಅಳವಡಿಸಿಕೊಂಡು, ಕಾಯಕ ದಾಸೋಹ ತತ್ವಗಳನ್ನು ಪಾಲಿಸಬೇಕು’ ಎಂದು ತಿಳಿಸಿದರು.ಹೂವಿನಹಡಗಲಿ ಹಿರಿಶಾಂತವೀರ ಗವಿಮಠದ ಸ್ವಾಮೀಜಿ ಆಶೀರ್ವಾಚನ ನೀಡಿದರು. ಗಣೇಶೋತ್ಸವ ಸುವರ್ಣ ಸಂಭ್ರಮ ಪ್ರಯುಕ್ತ ಸೆ.14ರವರೆಗೆ ಪ್ರತಿದಿನ ಸಂಜೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಪ್ರವಚನ, ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಭಾನುವಾರ ಸಕಲ ವಾದ್ಯ ಕಲಾಮೇಳದೊಂದಿಗೆ ಸಂಭ್ರಮದಿಂದ ಗಣೇಶನ ವಿಸರ್ಜನೆ ಜರುಗಲಿದ್ದು ಅಂದು ಶ್ರೀ ವಿಘ್ನೇಶ್ವರ ಯುವಕ ಸಂಘದ ಹಿರಿಯರು.ಕಿರಿಯರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.