ಶಿಗ್ಗಾವ್

ಶಶಿಧರ ಯಲಿಗಾರ 58 ನೇ ಹುಟ್ಟು ಹಬ್ಬ: ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಶಶಿಧರ ಯಲಿಗಾರ 58 ನೇ ಹುಟ್ಟು ಹಬ್ಬ: ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಶಿಗ್ಗಾವಿ ಃ ಮತ್ತೋಬ್ಬರಿಗೆ ಸಹಾಯ ಮಾಡುವದರಿಂದ ನನ್ನ ಜೀವನ ಸಂತೋಷವಾಗಿದೆ, ಗಳಿಸಿದ್ದನ್ನು ಬಿಟ್ಟು ಹೋಗುವ ಬದಲು ಹಂಚಿ ಹೋಗಬೇಕೆಂದು ಈ ಕಾರ್ಯ ಮಾಡುತ್ತಿದ್ದೇನೆ, ಜನತೆ ತೊರುವ ಪ್ರೀತಿ, ವಿಶ್ವಾಸ ಸಹಾಯ ಮಾಡಲು ಪ್ರೇರಣೆಯಾಗುತ್ತಿದೆ, ಜನತೆ ರಾಜಕೀಯಕ್ಕೆ ಬನ್ನಿ ಎಂಬ ಒತ್ತಡ ಹಾಕುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಅಭಿಪ್ರಾಯ ಪಡೆದುಕೊಂಡು ರಾಜಕೀಯ ನಿಧರ್ಾನ ಮಾಡುತ್ತೇನೆ ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.

ಪಟ್ಟಣದ ರಂಭಾಪೂರಿ ಕಾಲೇಜಿನ ಪಕ್ಕದ ಜಮೀನಿನಲ್ಲಿ ಶಶಿಧರ ಯಲಿಗಾರ ಅವರ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡ ತಮ್ಮ 58 ನೇ ಹುಟ್ಟು ಹಬ್ಬದ ಅಂಗವಾಗಿ ಕಾಲೇಜು ವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಎನ್ಎಸ್ಎಸ್ ವಿದ್ಯಾಥರ್ಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಿಮೆ ಅಂಕಗಳನ್ನು ಗಳಿಸಿದ ವಿದ್ಯಾಥರ್ಿಗಳು ಇಂದು ಭಯಪಡುವ ಅವಶ್ಯಕತೆವಿಲ್ಲ, ಸಾಧಿಸುವ ಛಲ ಒಂದಿದ್ದರೆ ಸಾಕು, ಮಕ್ಕಳನ್ನು ಹಾಳು ಮಾಡುವ ಉದ್ದೇಶ ಇದ್ದರೆ ಮಕ್ಕಳಿಗೆ ಆಸ್ತಿ ಮಾಡಿ, ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಬೆಂಕೆಂದರೆ ದುಡಿಯುವದನ್ನು ಕಲಿಸಿ, ಇಂದು ಶ್ರೀಮಂತರು, ಬಡವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.

ಗಂಗೇಬಾವಿಯಲ್ಲಿ ರಿಸಾರ್ಟ ಮಾಡುತ್ತಿದ್ದೇನೆ,  ಟಿಕೆ ಟಿಪ್ಪಣಿಗಳು ಬಂದವು ಅವನ್ನು ಲೇಕ್ಕಿಸದೆ ದೇಶದಲ್ಲಿ ಅತ್ಯುನ್ನತ ರೆಸಾರ್ಟ ಮಾಡುವ ಸಂಕಲ್ಪ ಮಾಡಿದ್ದೆನೆ, ವಿದ್ಯಾಥರ್ಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆವೆ, ವಿದ್ಯಾಥರ್ಿನಿಯರಿಗೆ ಕೆಲಸ ಕೊಡುವ ಯೋಜನೆಗಳನ್ನು ಮಾಡುತ್ತಿದ್ದೆವೆ, ಡಿಸೆಂಬರ ನಲ್ಲಿ ನನ್ನ ರೆಸಾರ್ಟ ಉದ್ಘಾಟನೆಗೊಳ್ಳುತ್ತಿದೆ, ಗುಡಿ ಕೈಗಾರಿಗೆ ಕೆಲಸಗಳನ್ನು ಮಾಡಿಸುವ ಕೆಲಸ ಮಾಡಿಸಲಾಗತ್ತದೆ, ಅದರಲ್ಲಿನ ಲಾಭವನ್ನು ಅಲ್ಲಿ ದುಡಿಯುವ ತಾಯಂದಿಗೆ ಹಂಚುವ ಕೆಲಸವನ್ನು ಮಾಡಲಾಗುತ್ತದೆ, ವಾಟರ್ ಪ್ಲಾಂಟ್ ಮೂಲಕ ನೀರಿನ ಮಾರಾಟಕ್ಕೆ 300 ಜನರನ್ನು ತೆಗೆದುಕೊಳ್ಳಲಾಗುತ್ತದೆ, ಉದ್ಯೋಗದ ಜೊತೆಗೆ ಅದರ ಲಾಭದಲ್ಲಿ ಪಾಲನ್ನು ನೀಡುವ ಯೋಜನೆಯನ್ನು ಮಾಡಿದ್ದೆವೆ, ಮುಂದಿನ ವರ್ಷ 5000 ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಯಿತ್ತು, ಬಂಕಾಪೂರ ಅರಳೆಲೆಮಠದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠ ಸಂಗನಬಸವ ಮಹಾಸ್ವಾಮಿಗಳು, ಹಿರೇಮಣಕಟ್ಟಿ ಮುರಗೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿದ್ಯ ವಹಿಸಿಕೊಂಡಿದ್ದರು. ಮಾಜಿ ಸಚಿವ ವಿನಯ್ ಕುಲಕಣರ್ಿ, ಮಾಜಿ ಶಾಸಕ ಅಜ್ಜಂಪೀರ್ ಎಸ್ ಖಾದ್ರಿ, ಶಣ್ಮುಖಪ್ಪ ಶಿವಳ್ಳಿ, ಬಸವರಾಜ ಹಾವೇರಿ, ಶಂಬು ಆಜೂರ, ಹಾವೇರಿ ನಗರಸಭೆ ಅದ್ಯಕ್ಷ ಸಂಜೀವಕುಮಾರ ನೀರಲಗಿ, ನಾಗೇಂದ್ರಪ್ಪ ಕಡಕೋಳ, ಡಾ. ಅರಳೆಲೆಮಠ, ಸುನಿತಾ ಯಲಿಗಾರ ಸೇರಿದಂತೆ ಪಕ್ಷಾತೀತ ವಿವಿಧ ಪಕ್ಷದ ಮುಖಂಡರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಕೀಲರು, ಸಮಾಜ ಸೇವಕರು, ಜನಪ್ರತಿನಿಧಿಗಳು ಹಾಗೂ ಕುಟುಂಬಸ್ಥರು, ಆಶಾ ಕಾರ್ಯಕತರ್ೆಯರು, ವಿವಿಧ ಶಾಲೆಯ ವಿದ್ಯಾಥರ್ಿಗಳು ಸೇರಿದಂತೆ ಶಶಿಧರ ಅಭಿಮಾನಿ ಬಳಗದ ಸದಸ್ಯರು  ಭಾಗಿಯಾಗಿದ್ದರು, ನಿವೃತ್ತ ಶಿಕ್ಷಕ ಎನ್ ಎಸ್ ಬರದೂರ ಆಶಯ ನುಡಿ ನುಡಿದರು, ನಿದರ್ೇಶಕ ಬಸವರಾಜ ಕುರಗೋಡಿ ಸ್ವಾಗತಿಸಿದರು.



 

ಸುದ್ದಿ ಓದಿ