ಶಶಿಧರ ಮೀಶಿ ಹುಟ್ಟುಹಬ್ಬ ನಿಮಿತ್ತ ರಕ್ತದಾನ, ಸಸಿ ನೆಡುವ ಕಾರ್ಯಕ್ರಮ
ಜಮಖಂಡಿ 17: ನಾಮನಿರ್ದೇಶಿತ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಹಾಗೂ ಕರ್ನಾಟಕ ರಾಜ್ಯ ಶೋಷಿತ ಸಮುದಾಯದಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಸಮಿತಿ ಸದಸ್ಯ ಶಶಿಧರ ಮೀಶಿ ಅವರು ತಮ್ಮ 40 ನೇ ಹುಟ್ಟುಹಬ್ಬದ ನಿಮಿತ್ಯ ಹಲವಾರು ಸಮಾಜಮುಖಿ ಕೆಲಸಗಳ ಮೂಲಕ ಅಭಿಮಾನಿ ಬಳಗದಿಂದ ಅರ್ಥಗರ್ಭಿತವಾಗಿ ಹುಟ್ಟು ಹಬ್ಬ ಆಚರಿಸಿಕೊಂಡು.
40ಕ್ಕೂ ಹೆಚ್ಚು ಜನ ರಕ್ತದಾನ, ಶಾಂತಿನಗರದ ಬುದ್ಧ ವಿಹಾರದಲ್ಲಿ 52ಕ್ಕೂ ಅಧಿಕ ಸಸಿಗಳನ್ನು ನೆಡುವ ಮತ್ತು ಸರ್ಕಾರಿ 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿ ನೀರು ಕಾಯಿಸುವ ಸುಸಜ್ಜಿತ ಒಲೆಗಳ ನಿರ್ಮಾಣ ಮತ್ತು ರುದ್ರಸ್ವಾಮಿಪೇಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 90 ವಿದ್ಯಾರ್ಥಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಈ ವೇಳೆ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ರುದ್ರಾವದೂತಮಠದ ಕೃಷ್ಣಾನಂದ ಶ್ರೀಗಳು, ಅರುಣಕುಮಾರ ಶಹಾ, ಸುರೇಶ ಕಂಟಿ, ಎನ್.ಎಸ್. ದೇವರವರ, ಮಹೇಶ ಕೋಳಿ, ಈಶ್ವರ ವಾಳೆನ್ನವರ, ಯಮನಪ್ಪ ಗುಣದಾಳ, ಸಿದ್ದು ಮೀಶಿ, ಮಲ್ಲು ಆಳಗಿ, ಗುರುರಾಜ ವಾಳ್ವೇಕರ, ಅಪ್ಪು ಪೋತರಾಜ, ಮಲ್ಲು ಮಠ, ಸೂರಜ ಕುಡ್ರಾಣಿ, ಪರಶುರಾಮ ಕಾಂಬಳೆ, ನಿತೇಶ ಜೈನ, ರಾಯಬಾ ಜಾಧವ, ಪ್ರದೀಪ ಮೆಟಗುಡ, ಕುಶಾಲ್ ವಾಘಮೊರೆ ಅನೇಕರಿದ್ದರು.