ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿದ ಅಪೂರ್ವವಾದ ಕೊಡುಗೆ: ಜೆ. ಎಂ.ನಾಗಯ್ಯ
ಧಾರವಾಡ 15: ಕನ್ನಡ ಸಾಹಿತ್ಯಕ್ಕೆ ಶರಣರು ನೀಡಿದ ವಚನ ಸಾಹಿತ್ಯಒಂದುಅಪೂರ್ವವಾದಕೊಡುಗೆಯಾಗಿದೆ.ಆದರೆ ಕೆಲವೇ ಕೆಲವು ವಚನಕಾರರ ಬಗೆಗೆ ಉಪನ್ಯಾಸಗಳು, ಚರ್ಚೆಗಳು, ಅಧ್ಯಯನಗಳು ನಡೆಯುತ್ತಿವೆ. ಕೆಳವರ್ಗಗಳಿಂದ ಬಂದ ಅನೇಕ ವಚನಕಾರರ ಬಗೆಗೆ ಚರ್ಚೆ ಸಂವಾದಗಳು ಇಲ್ಲವಾಗಿವೆ. ಹೀಗಾಗಿ ಆದ್ಯವಚನಕಾರ ದೇವರದಾಸಿಮಯ್ಯನವರಂಥ ಮಹತ್ವದ ವಚನಕಾರರು ಅಂಚಿಗೆ ತಳ್ಳಲ್ಪಟ್ಟಿದ್ದಾರೆ ಎಂದುಧಾರವಾಡಕರ್ನಾಟಕ ವಿಶ್ವವಿದ್ಯಾಲಯದ ಪಂಪ ಅಧ್ಯಯನ ಪೀಠದ ಸಂಯೋಜಕಡಾ. ಜೆ. ಎಂ.ನಾಗಯ್ಯ ಅವರು ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು.ಆದ್ಯ ವಚನಕಾರ ‘ದೇವರ ದಾಸಿಮಯ್ಯ ಜಯಂತ್ಯೋತ್ಸವ’ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ ‘ಶಾಸನಗಳಲ್ಲಿ ದೇವರ ದಾಸಿಮಯ್ಯ ಮತ್ತು ದುಗ್ಗಳೆ’ ವಿಷಯಕುರಿತುಅತಿಥಿಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ದೇವರ ದಾಸಿಮಯ್ಯ ಮತ್ತುಜೇಡರ ದಾಸಿಮಯ್ಯ ಬೇರೆ ಬೇರೆಅಲ್ಲ. ಒಬ್ಬರೆಎಂಬುದನ್ನು ಈ ಹಿಂದಿನ ವಿದ್ವಾಂಸರ ಅಭಿಪ್ರಾಯಗಳು ಈಗ ದೊರೆತ ಶಾಸನಗಳು ಮತ್ತುಕನ್ನಡ ಕಾವ್ಯಗಳನ್ನು ಆಧರಿಸಿ ದಾಸಿಮಯ್ಯನ ಬಗೆಗಿನ ಗೊಂದಲಗಳಿಗೆ ತೆರೆ ಎಳೆದರು.ದಾಸಿಮಯ್ಯನ ಹತ್ತು ಮತ್ತು ದುಗ್ಗಳೆಯ ಮೂರು ಶಾಸನಗಳನ್ನು ಎಳೆ ಎಳೆಯಾಗಿ ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕ.ವಿ.ವಿಯಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಂ.ಷಡಕ್ಷರಯ್ಯ ಮಾತನಾಡುತ್ತಾ, ದಾಸಿಮಯ್ಯನ ಚರಿತ್ರೆ ನಿರ್ಮಾಣಕ್ಕೆ ಪ್ರೊ.ಜೆ.ಎಂ. ನಾಗಯ್ಯನವರಅವರಉಪನ್ಯಾಸ ಪೂರಕವಾಗಿದೆಎಂದರು.
ಮುಖ್ಯಅತಿಥಿ ಮಹಾದೇವಕರಮರಿ ವಚನಕಾರರಕೊಡುಗೆಯನ್ನು ಸ್ಮರಿಸಿದರು.ದತ್ತಿದಾನಿ ಪ್ರಸನ್ನರಾಮಚಂದ್ರಗೆದ್ದೆಣ್ಣವರಅವರು ದಾಸಿಮಯ್ಯನ ಕುರಿತು ಬೆಳಕಿಗೆ ಬಂದ ಹೊಸ ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಇಂಗಿತ ವ್ಯಕ್ತಪಡಿಸಿದರು. ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಉಪಸ್ಥಿತರಿದ್ದರು.
ಶಂಕರ ಕುಂಬಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ವಂದಿಸಿದರು.ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಶೈಲಜಾಅಮರಶೆಟ್ಟಿ, ಡಾ.ಮಹೇಶ ಧ. ಹೊರಕೇರಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ ಸೇರಿದಂತೆ ಮುಂತಾದವರಿದ್ದರು.