ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಅದ್ದೂರಿ ಸ್ವಾಗತ
ಲೋಕದರ್ಶನ ವರದಿ
ಶೇಡಬಾಳ 11: ಕಾಗವಾಡ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಸಂಸ್ಥೆಗಳು, ಕರವೇ ಪದಾಧಿಕಾರಿಗಳು, ಅಭಿಮಾನಿಗಳು, ಕುಂಭಹೊತ್ತ ಮಹಿಳೆಯರು, ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಮಂಗಳವಾರ ದಿ. 10 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯು ಕಾಗವಾಡ ಪಟ್ಟಣದ ಚೆನ್ನಮ್ಮ ಸರ್ಕಲ್ಗೆ ಆಗಮಿಸುತ್ತಿದ್ದಂತೆ ಕಾಗವಾಡ ತಹಶೀಲ್ದಾರ ಹಾಗೂ ಇನ್ನಿತರ ಅಧಿಕಾರಿಗಳು, ರಾಜಕೀಯ ಮುಖಂಡರು, ಕರವೇ ಸದಸ್ಯರು ರಾಯಣ್ಣ ಜ್ಯೋತಿಗೆ ಪೂಜೆ ಸಲ್ಲಿಸಿ ಆದರದಿಂದ ಪಟ್ಟಣಕ್ಕೆ ಜ್ಯೋತಿಯನ್ನು ಬರಮಾಡಿಕೊಂಡರು.
ತಾಲ್ಲೂಕು ದಂಡಾಧಿಕಾರಿ ರಾಜೇಶ್ ಬುರ್ಲ್ ಮಾತನಾಡಿ, ಸಂಗೊಳ್ಳಿ ರಾಯಣ್ಣ ಸಾಹಸ ಪ್ರವೃತ್ತಿ ಜಗತ್ತಿಗೆ ಪಸರಿಸಲು ನಾಡಿನಾದ್ಯಂತ ಸಂಚರಿಸುತ್ತಿರುವ ಈ ಅಮರ ಜ್ಯೋತಿಗೆ ಭೇದ-ಭಾವ ಮರೆತು ಅಧಿಕಾರಿಗಳು ಎಲ್ಲ ಜನಾಂಗದವರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಎಂದಿಗೂ ತನಗಾಗಿ ತನ್ನ ಅಧಿಕಾರಕ್ಕಾಗಿ ಬದುಕಲಿಲ್ಲ. ನಾಡಿಗೆ ದೊರಕಿಸಿಕೊಡಲು ತನ್ನ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ಮುಂದೆ ಡೊಳ್ಳು ವಾದನ, ಜಲ ಕುಂಭ ಹೊತ್ತ ಮಹಿಳೆಯರು, ಎಲ್ಲ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕತರ್ೆಯರು, ಕನರ್ಾಟಕ ರಕ್ಷಣಾ ವೇದಿಕೆಯ ಸದಸ್ಯರು, ಅನೇಕ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮದ ಮುಖಂಡರು ಮೆರವಣಿಗೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
ನಂತರ ಅಥಣಿ ಮಾರ್ಗವಾಗಿ ಜ್ಯೋತಿಯನ್ನು ಬಿಳ್ಕೋಡಲಾಯಿತು.
ಈ ಸಮಯದಲ್ಲಿ ತಹಸೀಲ್ದಾರ ರಾಜೇಶ ಬುರ್ಲ್ , ಉಪತಶೀಲ್ದಾರ ಅಣ್ಣಾಸಾಬ ಕೋರೆ, ಬಿಇಓ ಎಮ್ .ಆರ್ ಮುಂಜೆ, ಸಿಡಿಪಿಓ ಸಂಜೀವಕುಮಾರ ಸದಲಗಿ, ಶಿವಾನಂದ ಮಹಾವಿದ್ಯಾಲಯ ಪ್ರಾಚಾರ್ಯ ವ್ಹಿ.ಎಸ್.ತುಗಶೆಟ್ಟಿ, ರಕ್ಷಣಾ ವೇದಿಕೆ ಅಧ್ಯಕ್ಷರ ಸಿದ್ದು ಒಡೆಯರ, ಶಿವಾನಂದ ನವಿನಾಳೆ, ರಮೇಶ ಚೌಗಲೆ, ಕಾಕಾ ಪಾಟೀಲ್, ಅಸ್ಲಾಂ ಜಮಾದಾರ, ಪ್ರವೀಣ್ ಪಾಟೀಲ್ ಸೇರಿದಂತೆ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು ಗ್ರಾಮಸ್ಥರು ಅಪಾರಸಂಖ್ಯೆಯಲ್ಲಿ ಉಪಸ್ಥಿತರಿದ್ದರು