ಶಿಗ್ಗಾವ್

ಸಂಗನಬಸವಶ್ರೀಗಳ ನಡೆ ಮಾದರಿ: ಬೇವಿನಮರದ

ಸಂಗನಬಸವಶ್ರೀಗಳ ನಡೆ ಮಾದರಿ: ಬೇವಿನಮರದ

ಶಿಗ್ಗಾವಿ 27:  ಪ್ರಕೃತಿ ಉಳಿದರೆ ನಾವು ಉಳಿದೇವು ಸಮೂದಾಯ ಭಾಗೀತ್ವದಲ್ಲಿ ಪರಿಸರ ಸಂರಕ್ಷಣೆ, ಸಮಾಜ ತಿದ್ದುವ ಕೆಲಸಕ್ಕೆ ಮುಂದಾದ ಸಂಗನಬಸವಶ್ರೀಗಳ ನಡೆ ಇತರರಿಗೆ ಮಾದರಿಯಾಗಿದೆ ಎಂದು ಮಾಜಿ ವಿಪ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು. 

ಶಿಗ್ಗಾವಿ ವಿರಕ್ತವ್ಮಠದ ಸಂಗನಬಸವಶ್ರೀಗಳ ಸಸ್ಯ ಶ್ರಾವಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಸಿ.ಬಿಯಲಿಗಾರ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ, ಕಳೆದ ನೂರುವರ್ಷಗಳಲ್ಲಿ ದೇಶದ ಕಾಡು ಮೊದಲಿನ ಅರ್ದದಷ್ಟೂ ಉಳಿದಿಲ್ಲ. ಕೇವಲ ಅಭಿವೃದ್ಧಿ ಬಗ್ಗೆ ನಾವು ಚಿಂತನೆ ಮಾಡುತ್ತೇವೆ. ಶುದ್ಧಗಾಳಿಯನ್ನು ಪಡೆಯಲು ಹಣಕರ್ಚು ಮಾಡಬೇಕಾದ ಸನ್ನಿವೇಶ ಎದುರಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು. 

ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಶ್ರಾವಣ ಮಾಸ ಪವಿತ್ರವಾದದ್ದನ್ನು ನಾಡಿಗೆ ಜನರಿಗೆ ಒಳಿತಿಗಾಗಿ ಸಂದೇಶ ಶ್ರವಣ ಮಾಡಬೇಕು ಎಂಬುವ  ಶ್ರೀಗಳ ಮನದಿಚ್ಛೇ ಪೂರ್ಣವಾಗಿದೆ. ಸಮೂದಾಯಕ್ಕೆ ಪರಿಸರದ ಅರಿವು ಮೂಡಿಸಿದ್ದಾರೆ. ಎಂದರು. 

ಮನೆಮನೆಗೂ ಸಸ್ಯ ವಿತರಿಸುತ್ತಾ ನಡೆದ ಕಾರ್ಯಕ್ರಮದದ್ದಕ್ಕೂ ಬಸವರಾಜ ಶಿಗ್ಗಾವಿ ಹಾಗೂ ಶರೀಫ ಮಾಕನವರ ಜಾನಪದ ಹಾಡುಸಂಗೀತ ಜನರ ಮನಸೂರೆಗೊಂಡಿತು.ರಾಜ್ಯೋತ್ಸವ ಪ್ರಶಸ್ತಿ ವಿಜೇಯಿತ ಕೊಟ್ರೇಶ ಮಾಸ್ತರ ಬೆಳಗಲಿ, ಪಂಚಾಕ್ಷರಿ ಗವಾಯಿಗಳವರ ಕಲಾವಿದರ ಬಳಗದ ಗೌರವಾಧ್ಯಕ್ಷ ಕೊಂಡಾಯಿ ವಿವಿಧ ಕಲಾವಿದರು ಗ್ರಾಮದ ಹಿರಿಯರಾದ ಮಲ್ಲೇಶಪ್ಪ ವ್ಯಂಕೋಜಿ, ಮಾಲತೇಶ ಕಮ್ಮಾರ, ಗ್ರಾಪಂ ಸದಸ್ಯರು. ಅಲ್ಲದೇ ಸಾಹಿತ್ಯ ಪರಿಷತ್ತ ಸದಸ್ಯ ಮಲ್ಲೇಶಪ್ಪ ರಾಮಗಿರಿ, ಬಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರದಾನ ಗುರುಗಳು ಶಿಕ್ಷಕರು. ಮಕ್ಕಳ ಪಾಲಕರು ಅಲ್ಲದೇ ಗ್ಪಣ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ