ಸಂಚಾರಿ ಬಸವ ಪುರಾಣ ಆರಂಭಿಸಿದವರು ಒಪ್ಪತ್ತೇಶ್ವರ ಶ್ರೀ
ಗುಳೇದಗುಡ್ಡ 16: ಪಟ್ಟಣದ ಒಪ್ಪತ್ತೇಶ್ವರ ಸಂಸ್ಥಾನಮಠದ ಪೀಠಾಧಿಪತಿಗಳಾದ 16ನೇ ಅಭಿನವ ಒಪ್ಪತ್ತೇಶ್ವರ ಶ್ರೀಗಳ ಪಟ್ಟಾಧಿಕಾರದ 25ನೇ ರಜತ ಮಹೋತ್ಸವ, ಜನ್ಮ ಸುವರ್ಣಮಹೋತ್ಸವ, ಶ್ರೀಮಠದ ಕಾರ್ತಿಕೋತ್ಸವ, ತಾಲೂಕಿನ ಮಠಾಧಿಪತಿಗಳ ಸಮಾವೇಶ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಅಭಿನವ ಒಪ್ಪತ್ತೇಶ್ವರ ಶ್ರೀಗಳಿಗೆ ಹನಮಂತಪ್ಪ ಸಿದ್ಧಪ್ಪ ಹುಲ್ಯಾಳ ಕುಟುಂಬದಿಂದ ರುದ್ರಾಕ್ಷಿ ಹಾಗೂ ಭಸ್ಮದಿಂದ ತುಲಾಭಾರ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಗುಳೇದಗುಡ್ಡ ತಾಲೂಕಿನ ಮಠಾಧಿಪತಿಗಳ ಸಮಾವೇಶ ಜರುಗಿತು.
ಹೊಳೆಹುಚ್ಚೇಶ್ವರ ಶ್ರೀಗಳು ಮಾತನಾಡಿ, ಅಭಿನವ ಒಪ್ಪತ್ತೇಶ್ವರ ಶ್ರೀಗಳು ಆಧ್ಮಾತ್ಮದ ಜೊತೆಗೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಒಪ್ಪತ್ತೇಶ್ವರ ಮಠವು ಭಕ್ತರಿಗೆ ಉತ್ತಮ ಸಂಸ್ಕಾರ ಆಚಾರ ವಿಚಾರ ನೀಡಿ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದೆ ಎಂದರು. ಘಟಪ್ರಭಾದ ಡಾ.ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಒಪ್ಪತ್ತೇಶ್ವರ ಶ್ರೀಗಳ ಸಂಚಾರಿ ಬಸವ ಪುರಾಣ ಹೇಳುವ ಮೂಲಕ ಬಸವ ತತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದಾರೆ. ಪಾದರಸದಂತೆ ಸದಾ ಕ್ರೀಯಾಶೀಲರಾಗಿ, ಓಡಾಡುತ್ತಾರೆ. ಅವರಂತಹ ಶ್ರೀಗಳನ್ನು ಪಡೆದ ನೀವೆಲ್ಲರೂ ಧನ್ಯರು. ಸದಾ ಕ್ರೀಯಾಶೀಲರಾಗಿ ಮಠ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಶ್ರೀಗಳ ಕುರಿತಾಗಿ ಐದು ಗ್ರಂಥಗಳನ್ನು ಲೋಕಾರೆ್ಣ ಮಾಡಲಾಯಿತು. ಅಲ್ಲದೇ ಶ್ರೀಮಠದ ದಾನಿಗಳನ್ನು, ಗಣ್ಯರನ್ನು, ನಾನಾ ಮಠಾಧೀಶರನ್ನು ಸತ್ಕರಿಸಲಾಯಿತು. ಅಕ್ಕನ ಬಳಗದವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಠಾಧಿಪತಿಗಳ ಸಮಾವೇಶದಲ್ಲಿ ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು, ಎರೆಡೆತ್ತಿನ ಮಠದ ಸಿದ್ದಲಿಂಗ ಶ್ರೀಗಳು, ಬಸವರಾಜ ಪಟ್ಟದಾರ್ಯ ಶ್ರೀಗಳು, ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಕೈಲಾಸಪತಿ ಶ್ರೀಗಳು, ಗುರಗುಂಟಾದ ಸದಾನಂದ ಶಿವಾಚಾರ್ಯ ಶ್ರೀಗಳು, ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು, ಟೆಂಗಿನಮಠದ ಮಲ್ಲಿಕಾರ್ಜುನ ದೇವರು, ಕೆಳದಿಯ ಮೃತ್ಯುಂಜಯ ದೇಶಿಕೇಂದ್ರ ಶ್ರೀಗಳು ಜಿಗೇರಿ ಹಿರೇಮಠದ ಗುರುಸಿದ್ದೇಶ್ವರ ಶ್ರೀಗಳು, ಅಕ್ಕಲಕೋಟೆ ಚಿಕ್ಕರೇವಣಸಿದ್ದ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಆರ್.ಸಿ.ಭಂಢಾರಿ, ಗಂಗಯ್ಯ ಮುಚಖಂಡಿಮಠ, ಎಂ.ಬಿ.ಹಂಗರಗಿ, ಮಹೇಶ ಹೊಸಗೌಡರ, ಆರ್.ಎಫ್.ಬಾಗವಾನ ಸೇರಿದಂತೆ ಇತರರು ಇದ್ದರು.
ಫೋಟೊ:16ಜಿಎಲ್ಡಿ1- ಗುಳೇದಗುಡ್ಡ ಪಟ್ಟಣದಲ್ಲಿ ಮಠಾಧಿಪತಿಗಳ ಸಮಾವೇಶ ಉದ್ಘಾಟಿಸಲಾಯಿತು.
ಫೋಟೊ:16ಜಿಎಲ್ಡಿ2- ಗುಳೇದಗುಡ್ಡ ಪಟ್ಟಣದ ಅಭಿನವ ಒಪ್ಪತ್ತೇಶ್ವರ ಶ್ರೀಗಳ ತುಲಾಭಾರ ಕಾರ್ಯಕ್ರಮ ನಡೆಯಿತು.