ಧಾರವಾಡ - ಹುಬ್ಬಳ್ಳಿ

ಜೆಎಸ್‌ಎಸ್ ಆರ್‌ಎಸ್ ಹುಕ್ಕೇರಿಕರ್ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಜೆಎಸ್‌ಎಸ್ ಆರ್‌ಎಸ್ ಹುಕ್ಕೇರಿಕರ್  ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಧಾರವಾಡ 13:  ಶಹರ ತಾಲೂಕ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಜೆ.ಎಸ್‌.ಎಸ್ ಆರ್‌.ಎಸ್ ಹುಕ್ಕೇರಿಕರ್ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಪಡೆಯುವದರೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಪ್ರಾಚಾರ್ಯೆ ಭಾರತಿ ಶಾನಬಾಗ,  ಮಹಾವೀರ ಉಪಾದ್ಯೆ, ಜಿನ್ನಪ್ಪ ಕುಂದಗೋಳ, ಬಾಹುಬಲಿ ಚೌಗಲಾ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ. 


ಸುದ್ದಿ ಓದಿ