ಮನರಂಜನೆ

“ಓಲೆ ಓಲೆ” ಹಾಡನ್ನು ಮರು ಸೃಷ್ಟಿಸಿದ ಸೈಫ್

“ಓಲೆ ಓಲೆ” ಹಾಡನ್ನು ಮರು ಸೃಷ್ಟಿಸಿದ ಸೈಫ್

ಮುಂಬೈ, ಜ.23 (ಯುಎನ್ಐ)- ಬಾಲಿವುಡ್‌ನ ಸ್ಟಾರ್ ನಟ ಸೈಫ್ ಅಲಿ ಖಾನ್ ತಮ್ಮ ಸೂಪರ್ ಹಿಟ್ ಹಾಡು ಓಲೆ ಓಲೆ ಹಾಡನ್ನು ಮರು ಸೃಷ್ಟಿಸಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಆಲಿಯಾ ಅಭಿನಯದ ಚಿತ್ರ ಜವಾನಿ ಜಾನೇಮನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸೈಫ್ ಈ ಚಿತ್ರದಲ್ಲಿ ಓಲೆ ಓಲೆ ಎಂಬ ತನ್ನ ಸೂಪರ್ ಹಿಟ್ ಹಾಡನ್ನು ರಿಕ್ರಿಯೇಟ್ ಮಾಡಿದ್ದಾರೆ. 1994 ರಲ್ಲಿ ಬಿಡುಗಡೆಯಾದ ಯೆ ದಿಲ್ಲಗಿ ಚಿತ್ರದಲ್ಲಿ ಓಲೆ ಓಲೆ ಹಾಡು ಚಿತ್ರೀಕರಿಸಲಾಗಿತ್ತು. ಹೊಸ ಹಾಡಿನ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ಬರೆದಿದ್ದು, ಅಮಿತ್ ಮಿಶ್ರಾ ಧ್ವನಿ ನೀಡಿದ್ದಾರೆ. ಈ ಹಾಡಿಗೆ ಸಾಮಾಜಿಕ ತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ.ಜವಾನಿ ಜಾನೆಮನ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಸೈಫ್ ಅಲಿ ಖಾನ್ ಅವರ ಮಗಳಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಟಬು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

  


ಸುದ್ದಿ ಓದಿ