ಎಸ್ಟಿಜೆಐಟಿ. ಮಹಾವಿದ್ಯಾಲಯ : ಉದ್ಯೋಗ ತರಬೇತಿ ಕಾರ್ಯಗಾರ
ರಾಣೇಬೆನ್ನೂರು 11: ನಗರಹೊರವಲಯದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಇತ್ತೀಚೆಗೆ ಬೆಂಗಳೂರಿನ ಕ್ಯಾಂಪಸ್ ಕ್ಲಿಕ್ ಅವರು 6 ದಿವಸಗಳ ಕಾಲ ಕಾಲೇಜಿನ ಆಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ತರಬೇತಿ ಕಾರ್ಯಗಾರವು ಆಯೋಜಿಸಿತ್ತು. , ಓದ್ಯೋಗಿಕವಾಗಿ ಅತ್ಯಂತ ಮಹತ್ವಪೂರ್ಣ ತರಬೇತಿ ನೀಡಿದ, ಕ್ಯಾಂಪಸ್ ಕ್ಲಿಕ್ ನ, ಎಂ.ಟಿ. ಅರಸು ಅವರು, ರಾಜ್ಯದಲ್ಲಿ ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳಿವೆ, ಪ್ರತಿಯೊಬ್ಬ ವಿದ್ಯಾರ್ಥಿಗಳು, ಉದ್ಯೋಗದ ಬಗ್ಗೆ, ಕೌಶಲ್ಯವನ್ನು ಹೊಂದಬೇಕು ಅಲ್ಲದೆ, ಸಂದರ್ಶನವನ್ನು ಯಾವುದೇ ಅಂಜಿಕೆ ಅಳುಕು ಇಲ್ಲದೆ ಸಮರ್ಪಕವಾಗಿ ಎದುರಿಸುವ ಗುಣ ಧರ್ಮವನ್ನು ಬೆಳೆಸಿಕೊಂಡಾಗ ಮಾತ್ರ, ಶಿಕ್ಷಣ ಅಂತಿಮವಾಗಿ ಪೂರೈಕೆ ಹಿಂದೆಯೇ ಉದ್ಯೋಗ ಲಭಿಸಲಿದೆ ಎಂದರು. ಕಾಲೇಜಿನಲ್ಲಿ ಇಂತಹ ಕೌಶಲ್ಯ ಭರಿತ ತರಬೇತಿ ಕಾರ್ಯಗಾರಗಳು ಆಯೋಜಿಸುವುದರಿಂದ, ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ, ಪ್ರೇರಣೆ ದೊರಕಿ ಉದ್ಯೋಗಸ್ಥರಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ: ಶಿವಕುಮಾರ್ ಬಿ. ಅವರು ಕಾರ್ಯಗಾರರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ:ಡಿ.ಎಸ್ ವಿಶ್ವನಾಥ್ , ಸಹಾಯಕ ಸಂಜಯ್ ಹೆಚ್. ಸೇರಿದಂತೆ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಉಪನ್ಯಾಸಕರು, ಕಾರ್ಯಕ್ರಮ ಆಯೋಜಕರು ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಸಮಾರೋಪ ಸಮಾರಂಭವು ಶನಿವಾರ 11ರಂದು ಮುಂಜಾನೆ ನೆರವೇರಿಸಲಾಯಿತು.