ಎಸ್ಟಿ, ಎಸ್ಸಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ
ಸಿರುಗುಪ್ಪ 22: ಮೀಸಲಾತಿ ನಮ್ಮ ಸಂವಿಧಾನದ ಹಕ್ಕು ಇಂದು ರಾಜ್ಯದಲ್ಲಿ ಶೇಕಡಾ 9ರಷ್ಟು ಜನಸಂಖ್ಯೆ ಇರುವ ವಾಲ್ಮೀಕಿ ಸಮುದಾಯಕ್ಕೆ ಕೇವಲ ಶೇಕಡಾ 3ರಷ್ಟು ಮೀಸಲಾತಿ ನೀಡುತ್ತಿರುವದು ನಮ್ಮ ಸಮುದಾಯಕ್ಕೆ ಮತ್ತಷ್ಟು ತಳಮಟ್ಟಕ್ಕೆ ಹೋಗುವಂತಾಗಿದೆ ಎಂದು ಮಾಜಿ ಶಾಸಕ ಬಿ ಎಂ ನಾಗರಾಜ್ ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇಕಡಾ 15ರಿಂದ 17ಕ್ಕೆ 3ರಿಂದ 7.5ಕ್ಕೆ ಪಂಗಡದ ವಾಲ್ಮೀಕಿ ಶ್ರೀಗಳ 100ನೇ ದಿನದ ಧರಣಿ ಬೆಂಬಲಿಸಿ ಎಸ್ಟಿ ಮತ್ತು ಎಸ್ಸಿ ಸಮಿತಿ ಆಗ್ರಹಿಸಿ ತಾಲ್ಲೂಕು ಕ್ರೀಡಾಂಗಣದಿಂದ ಮಹಾತ್ಮಾ ಗಾಂಧೀಜಿ ವೃತ್ತದ ವರೆಗೂ ಬೃಹತ್ ಯರ್ಾಲಿ ನಡೆಸಿ ಮಾನವ ಸರಪಳಿ ರಸ್ತೆ ತಡೆದು ಒತ್ತಾಯಿಸಿ ಪ್ರತಿಭಟಿಸಿ ತಾಲ್ಲೂಕು ಕಚೇರಿಗೆ ತೆರಳಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.
ಸಮುದಾಯದ ಮುಖಂಡ ನಗರಸಭಾ ಮಾಜಿ ಅಧ್ಯಕ್ಷ ಬಿ ಎಂ ಸತೀಶ್ ಮಾತನಾಡಿ ಬಿ ಈರಣ್ಣ ಆಮ್ ಆದ್ಮಿ ಪಕ್ಷದ ಟಿ ಧರಪ್ಪನಾಯಕ, ಕಾಂಗ್ರೆಸ್ ಮುಖಂಡ ಎಪಿಎಂಸಿ ಮಾಜಿ ಸದಸ್ಯ ನರೇಂದ್ರಸಿಂಹ ಹೊನ್ನಪ್ಪ, ಎನ್ ಬಿ ವೆಂಕಟೇಶ್, ಡಾ ಬಿ ಬಸವರಾಜು, ಕೃಷ್ಣ, ಹುಲುಗಪ್ಪ, ದಲಿತ ಸಂಘರ್ಷ ದ ಕೊಡ್ಲೆ ಮಲ್ಲಿಕಾಜರ್ುನ, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಮುನಿಸ್ವಾಮಿ, ವೆಂಕಟಪ್ಪ ನಾಯಕ, ಕಾಂಗ್ರೆಸ್ ಮುಖಂಡ ಬಿ ಕೆ ರಘು, ವೆಂಕಟಪ್ಪ, ಮುದುಕಪ್ಪ, ಈರಣ್ಣ, ವೆಂಕಟೇಶ, ಪಂಪಾಪತಿ, ರಮೇಶ ನಾಯಕ ವಿವಿಧ ಗಣ್ಯರು ಸಂಘಟನೆಗಳು ಭಾಗವಹಿಸಿದ್ದವು