ಎಸ್ಸೆಸ್ಸೆಲ್ಸಿ ಪರೀಕ್ಷೆ ಎಸಿ. ರಾಮಚಂದ್ರ ಗಡಾದೆ ಭೇಟಿ
ಇಂಡಿ: ತಾಲೂಕಿನಾದಂತ 18 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತಯುತಯಿಂದ ನಡೆಯಿತು. ಎಲ್ಲಿಯೂ ಅಹಿತಕರ ಘಟನೆ ನಡೆಯಲಿಲ್ಲ. ಇಂಡಿ ತಾಲೂಕಿನಲ್ಲಿ 2305 ವಿದ್ಯಾರ್ಥಿಗಳು ಮತ್ತು 2142 ವಿದ್ಯಾರ್ಥಿನಿಯರು ಸೋಮವಾರ ಪರೀಕ್ಷೆಗೆ ಬರೆದರು. 243 ವಿದ್ಯಾರ್ಥಿಗಳು ಪರೀಕ್ಷೆ ಗೈರು ಹಾಜರಿದ್ದರು. ಹಿಜಾಬ್ ಪ್ರಮೇಯ ಎಲ್ಲಿಯೂ ನಡೆಯಲಿಲ್ಲ. ಮತ್ತು ಡಿಬಾರ್ ಆದ ಪ್ರಕರಣಗಳಿಲ್ಲ.
ಪರೀಕ್ಷೆಯಲ್ಲಿ ಅವ್ಯವಹಾರ ನಡೆಯದಂತೆ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಯಲು ತಾಲೂಕಾ ಆಡಳಿತ ಮತ್ತು ಶಿಕ್ಷಣ ಇಲಾಖೆ ಕ್ರಮ ಕೈ ಕೊಂಡಿತ್ತು.
ಪರೀಕ್ಷಾ ಕೇಂದ್ರಗಳಿಗೆ ಎಸಿ ರಾಮಚಂದ್ರ ಗಡಾದೆ, ತಹಸೀಲ್ದಾರ ಸಿ.ಎಸ್. ಕುಲಕರ್ಣಿ, ಬಿಇಓ ವಸಂತ ರಾಠೋಡ ಸೇರಿದಂತೆ ಸ್ಥಾನಿಕ ಮುಖ್ಯಸ್ಥರು, ಪ್ಲೈಯಿಂಗ ಸ್ಕಾ-್ವಡ್ ಭೇಟಿ ನೀಡಿ ಪರೀಶೀಲಿಸಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿತ್ತು.