ಮನರಂಜನೆ

ಹಿರಿಯ ಗಾಯಕ ಎಸ್‍ ಪಿಬಿ ಚೇತರಿಕೆ : ಆಸ್ಪತ್ರೆಯಲ್ಲೇ ವಿವಾಹ ವಾರ್ಷಿಕೋತ್ಸವ

ಹಿರಿಯ ಗಾಯಕ ಎಸ್‍ ಪಿಬಿ ಚೇತರಿಕೆ : ಆಸ್ಪತ್ರೆಯಲ್ಲೇ ವಿವಾಹ ವಾರ್ಷಿಕೋತ್ಸವ

ಚೆನ್ನೈ, ಸೆಪ್ಟೆಂಬರ್ 08: ಹಿರಿಯ ಗಾಯಕ, ನಟ ಎಸ್‍‍ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಇತ್ತೀಚಿನ ತಪಾಸಣೆ ವೇಳೆ ಅವರಲ್ಲಿ ಕೊರೋನಾ ನೆಗೆಟಿವ್‌ ಬಂದಿದೆ ಎಂದು ಪುತ್ರ ಎಸ್‌.ಪಿ.ಚರಣ್‌ ಮಾಹಿತಿ ನೀಡಿದ್ದಾರೆ. 

‘ತಂದೆಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಅವರಿಗೆ ಕೊರೋನಾ ನೆಗೆಟಿವ್‌ ಬಂದಿದೆ. ಜೊತೆಗೆ ಶ್ವಾಸಕೋಶದಲ್ಲಿ ಉಂಟಾಗಿದ್ದ ಸೋಂಕು ನಿವಾರಣೆ ಆಗುತ್ತಿದ್ದು, ಫಿಸಿಯೋಥೆರಪಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

“ಆಸ್ಪತ್ರೆಯಲ್ಲೇ ತಂದೆ- ತಾಯಿಯ ವಿವಾಹ ವಾಷಿಕೋತ್ಸವವನ್ನು ಸಣ್ಣದಾಗಿ ಆಚರಿಸಲಾಯಿತು. ಇದರ ಜೊತೆಗೆ ತಂದೆ ಐಪಾಡ್ ನಲ್ಲಿ ಕ್ರಿಕೆಟ್  ಮತ್ತು ಟೆನಿಸ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದು, ಐಪಿಎಲ್ ಆರಂಭವನ್ನು ಎದುರುನೋಡುತ್ತಿದ್ದಾರೆ” ಎಂದಿದ್ದಾರೆ.  ಕೊರೋನಾ ಸೋಂಕಿಗೆ ತುತ್ತಾಗಿದ್ದ ಎಸ್‍ ಪಿ ಬಾಲಸುಬ್ರಮಣ್ಯಂ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು.  ಅವರ ಶೀಘ್ರ ಚೇತರಿಕೆಗಾಗಿ ಸ್ಯಾಂಡಲ್ ವುಡ್ ನ ನಟ, ನಟಿಯರು, ನಿರ್ಮಾಪಕರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಹಾರೈಸಿದ್ದರು.

  

ಸುದ್ದಿ ಓದಿ