ಮನರಂಜನೆ

ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್ : ಸಲ್ಮಾನ್ ಖಾನ್

ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್ : ಸಲ್ಮಾನ್ ಖಾನ್

ಮುಂಬೈ, ಸೆ 25 : ಮೇರು ಗಾಯಕ ಎಸ್‍ ಪಿ ಬಾಲಸುಬ್ರಹ್ಮಣ್ಯ ಅವರು ಹಿಂದಿ ಚಿತ್ರರಂಗದಲ್ಲೂ ತಮ್ಮ ಹಾಡುಗಳ ಮೂಲಕ ಮೋಡಿ ಮಾಡಿದವರು.  ಇದನ್ನು ನೆನಪಿಸಿಕೊಂಡಿರುವ ನಟ ಸಲ್ಮಾನ್ ಖಾನ್‍ “ಎಸ್‍ಪಿಬಿಯವರೇ ನಿಮ್ಮ ಹಾಡುಗಳು ನನಗೆ ಸ್ಪೆಷಲ್.  ಧನ್ಯವಾದಗಳು” ಎಂದು ಅವರು ಕೊನೆಯುಸಿರೆಳೆಯುವ ಕೆಲ ಸಮಯಕ್ಕೂ ಮುನ್ನ ಟ್ವೀಟ್ ಮಾಡಿದ್ದಾರೆ.

1989ರಲ್ಲಿ ತೆರೆಕಂಡ 'ಮೈನೆ ಪ್ಯಾರ್ ಕಿಯಾ' ಸಿನಿಮಾದಲ್ಲಿನ ಎಲ್ಲ ಹಾಡುಗಳನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಆನಂತರದಲ್ಲಿ 'ಹಮ್ ಆಪ್‌ಕೆ ಹೇ ಕೌನ್', 'ಪತ್ತರ್ ಕೆ ಫೂಲ್', 'ಲವ್', 'ಸಾಜನ್', 'ಅಂದಾಜ್ ಅಪ್ನಾ ಅಪ್ನಾ' ಮುಂತಾದ ಸಲ್ಮಾನ್ ನಟನೆಯ ಚಿತ್ರಗಳ ಹಾಡುಗಳಿಗೆ ದನಿಯಾದರು. 'ಹಮ್ ಆಪ್‌ಕೆ ಹೇ ಕೌನ್' ಸಿನಿಮಾದಲ್ಲಿ 14 ಹಾಡುಗಳಿದ್ದವು. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಅವರ ಹಾಡುಗಳೆಲ್ಲವೂವನ್ನು ಎಸ್‌ಪಿಬಿ ಹಾಗೂ ಲತಾ ಮಂಗೇಶ್ಕರ್ ಕಂಠಸಿರಿಯಲ್ಲಿ ಮೂಡಿಬಂದಿದ್ದವು. ಅಲ್ಲದೆ ಎಲ್ಲಾ ಹಾಡುಗಳೂ  ಹಿಟ್ ಆಗಿದ್ದವು. 1990ರಲ್ಲಿ ಮಾರಾಟವಾದ 4 ಟಾಪ್ ಆಡಿಯೋಗಳಲ್ಲಿ ಇದು ಕೂಡ ಒಂದಾಗಿತ್ತು. 1989ರಲ್ಲಿ ಅತಿ ಹೆಚ್ಚು ಬೆಲೆಗೆ ಈ ಆಡಿಯೋ ಮಾರಾಟವಾಗಿತ್ತು. 



ಸುದ್ದಿ ಓದಿ