ಅಭಿಮಾನಿಗಳ ಪ್ರಾರ್ಥನೆ, ಕರೋನ ಜಯಿಸಿದ ಬಾಲೂ ಸರ್ ...!!
ಚೆನ್ನೈ, ಆಗಸ್ಟ್ 24: ಸಂಗೀತ ದಿಗ್ಗಜ, ಸ್ವರ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊನೆಗೂ ಕರೋನ ಜಯಿಸಿದ್ದಾರೆ ಜೊತೆಗೆ ಆರೋಗ್ಯದಲ್ಲೂ ಹೆಚ್ಚಿನ ಸುಧಾರಣೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟ ತೊಂದರೆಯಾಗಿದ್ದರಿಂದ ಎಸ್ಪಿಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೊವಿಡ್ 19 ಲಕ್ಷಣಗಳಿರುವುದು ದೃಢಪಟ್ಟಿತ್ತು.
ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.ಇದೀಗ ಪರೀಕ್ಷೆಯಲ್ಲಿ ಅವರು ಕರೋನ ಮುಕ್ತರಾಗಿರುವುದು ಖಚಿತವಾಗಿದೆ.ಶ್ವಾಸಕೋಶದ ಸೋಂಕು ಉಲ್ಬಣಿಸಿ, ಆರೋಗ್ಯ ಸ್ಥಿತಿ ಕ್ಷೀಣಿಸತೊಡಗಿತ್ತು.
ಆದರೆ, ಆಪಾರ ಸಂಖ್ಯೆಯ ಅಭಿಮಾನಿಗಳ ಪ್ರಾರ್ಥನೆಯ ಫಲ- ಬಲ ಎಂಬಂತೆ ಕಳೆದ ಎರಡು ದಿನಗಳಿಂದ ಎಸ್ಪಿಬಿ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಜೊತೆಗೆ ಕರೋನದಿಂದ ಮುಕ್ತರಾಗಿದ್ದಾರೆ ಎಂದೂ ಪುತ್ರ ಎಸ್ಬಿ ಚರಣ್ ಸಹ ಹೇಳಿಕೊಂಡಿದ್ದಾರೆ.