ಎಸ್ ಎಲ್ ಪಾಂಡ್ರೆ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ
ಕಾಗವಾಡ 02: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಹೇಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಸ್ ಎಲ್ ಪಾಂಡ್ರೆ ಅವರ ಸ್ಮರಣಾರ್ಥ ಹಾಗೂ ದಸರಾ ಹಬ್ಬದ ನಿಮಿತ್ತವಾಗಿ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.
ಪಂದ್ಯಾವಳಿಯನ್ನ ಹೆಸ್ಕಾಂ ಇಲಾಖೆ ಅಭಿಯಂತರಾದ ಕಿಶೋರ ಕಾಂಬಳೆ ಇವರು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಡಿಎಮ್ ಮಾಳಿ, ಅಶೋಕ ಅರಳಿಕಟ್ಟಿ, ಹಣಮಂತ ಕೋಳಿ, ವಿಕಾಸ್ ಪಾಂಡ್ರೆ, ವಿಶಾಲ್ ಪಾಂಡೆ,್ರ ಗುರು ತಂಗಡಿ ಹಾಗೂ ರಾಘವೇಂದ್ರ ಗೌಡರ ಗುತ್ತಿಗೆದಾರರಾದ ಶೇಖರ್ ಗುಳಪ್ಪನವರ, ಸುನೀಲ ಮಾನೆ, ಸಂತೋಷ್ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.