ಎಸ್ಕೆಡಿ, ಆರಿ್ಡ.ಪಿ. ಸ್ವಾಸ್ಥ ಸಂಕಲ್ಪ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು: ಅನಿತಾ
ರಾಣೇಬೆನ್ನೂರು 17: ವಿದ್ಯೆ ಯಾರು ಕಸಿದುಕೊಳ್ಳುವ ವಸ್ತುವಲ್ಲ. ವಿದ್ಯೆಯ ಜೊತೆಗೆ ಬದುಕಿನ ಪರಿಪೂರ್ಣತೆಗಾಗಿ, ಯಾವುದೇ ದುಶ್ಚಟಗಳನ್ನು ಅಳವಡಿಸಿಕೊಳ್ಳದೆ, ನಿತ್ಯದ ಬದುಕಿನಲ್ಲಿ ನೈತಿಕತೆಯನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆ ಹೊಂದಲು ಸಾಧ್ಯವಾಗುವುದು ಎಂದು ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಅನಿತಾ ಕರ್ಜಗಿಮಠ ಹೇಳಿದರು. ಅವರು, ಪ್ರೌಢಶಾಲಾ ಸಭಾ ಭವನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಯೋಜಿಸಿದ್ದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರ ಸೂಸಲು, ಎಲ್ಲ ರೀತಿಯ ಅವಕಾಶಗಳಿವೆ. ಅನಾವಶ್ಯಕವಾಗಿ, ಸಮಯ ವ್ಯರ್ಥ ಮಾಡದೆ, ಸಮಯವನ್ನು ಸದುಪಯೋಗಪಡಿಸಿಕೊಂಡು ಮುನ್ನಡೆದರೆ, ಪರಿಪೂರ್ಣ ಗುರಿ ಮುಟ್ಟಲು ಸಾಧ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ, "ಅಭಿರುಚಿ " ಜಾನಪದ ಕಲಾ ಸಂಸ್ಥೆಯ, ಕಲಾ ನಿರ್ದೇಶಕ, ಕೆ.ಎಸ್. ನಾಗರಾಜ್ ಅವರು ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ಮಕ್ಕಳಲ್ಲಿರುವ ನೈಜ ಸಂಸ್ಕೃತಿಯನ್ನು ಹೊರಹೊಮ್ಮಿಸಲು ಅಡ್ಡಿಯಾಗುತ್ತಲ್ಲಿದೆ. ಇತಿಹಾಸದ ನಮ್ಮ ನೈಜ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವದ ಜೊತೆಗೆ ನೈತಿಕತೆ ತನ್ನಿಂದ ತಾನೇ ಬರಲಿದೆ, ಅಲ್ಲದೆ ಇತರೆ ಹವ್ಯಾಸಗಳಿಗೆ ತನ್ನಿಂದ ತಾನೇ ಕಡಿವಾಣ ಬೀಳಲಿದೆ ಎಂದರು.
ಜಂಕ್ಷ ಫುಡ್ ಸೇವನೆಯ ಪರಿಣಾಮ, ಇಂದು ಮಕ್ಕಳು ಬಲಹೀನತೆಯಿಂದ ಬಳಲುವಂತಾಗಿದೆ. ಪ್ರೌಢ ಶಾಲಾ ವಿದ್ಯಾರ್ಥಿಗಳ ಮನೋವಿಕಾಸತೆಯ ಮೊದಲ ಹಂತ ಇದಾಗಿದೆ ಇಂತಹ ಸಂದರ್ಭದಲ್ಲಿ ದುರಭ್ಯಾಸಗಳಿಗೆ ಬಲಿಯಾದರೆ ಜೀವನವೇ ಹಾಳಾದಂತೆ ಎನ್ನುವ ವಾಸ್ತವಿಕ ಸ್ಥಿತಿಯನ್ನು, ಜಾಗೃತಗೊಳಿಸಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ಮೇಲ್ವಿಚಾರಕ, ಸತೀಶ ಅವರು, ಎಸ್ ಕೆ ಡಿ ಆರ್ ಡಿ ಪಿ, ಯೋಜನೆಯಲ್ಲಿ, ಅನೇಕ ಕಾರ್ಯಕ್ರಮಗಳಿದ್ದು, ತಾಲೂಕಿನ, ಜಿಲ್ಲೆಯ,ರಾಜ್ಯದ ಮಹಿಳೆಯರು ಇವುಗಳ ಪ್ರಯೋಜನಗಳನ್ನು ಪಡೆದು ಆರ್ಥಿಕ ಸಬಲತೆಯನ್ನು ಹೊಂದುತ್ತಿರುವುದು.
ಕ್ಷೇತ್ರದ ಧರ್ಮಾಧಿಕಾರಿಗಳ, ಬಹು ನೀರೀಕ್ಷಿತ, ಉದ್ದೇಶಿತ ಕಾರ್ಯಕ್ರಮ ಯಶಸ್ವಿ ಕಾಣುತ್ತಲವೆ. ಬಾಲ್ಯಾವಸ್ಥೆಯಿಂದ, ಪ್ರೌಢಾವಸ್ಥೆಗೆ ಬರುವ ಮಕ್ಕಳಿಗಾಗಿ, ಅವರಲ್ಲಿ ಆತ್ಮವಿಶ್ವಾಸ, ಮತ್ತು ತಿಳುವಳಿಕೆ ಅರಿವು ಮೂಡಿಸುವ ಸ್ವಾಸ್ಥ ಸಂಕಲ್ಪ ಧರ್ಮಾಧಿಕಾರಿಗಳ ದೂರದೃಷ್ಟಿಯ ಯೋಜನೆ ಇದಾಗಿದೆ. ಮಕ್ಕಳು, ಯಾವುದೇ ಕಾರಣಕ್ಕೂ, ಯಾವುದೇ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕರಾದ ನಸ್ರುನ್ ತಾಜ್, ರೇಣುಕಾ ಪೊಲೀಸಗೌಡ್ರ, ಮತ್ತು ಯೋಜನೆಯ ಸಿಬ್ಬಂದಿ, ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು. ಸೌಭಾಗ್ಯ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಮಂಜುನಾಥ ಹಾದಿಮನಿ,ಸ್ವಾಗತಿಸಿ, ನಿರೂಪಿಸಿ ವಂದಿಸಿದರು.