ಗೋಕಾಕ್

ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸರ್ವರ ಸಹಕಾರವೇ ಶ್ರೀರಕ್ಷೆ -ಮಲ್ಲಿಕಾರ್ಜುನ ಈಟಿ

ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸರ್ವರ ಸಹಕಾರವೇ ಶ್ರೀರಕ್ಷೆ -ಮಲ್ಲಿಕಾರ್ಜುನ ಈಟಿ

ಗೋಕಾಕ: ಕನ್ನಡ ರಾಜ ರಾಜೇಶ್ವರಿಯ ಆರಾಧನೆಯೇ ಸಾಹಿತ್ಯ ಸಮ್ಮೇಳನದ ಪ್ರತೀಕ. ಎಲ್ಲರೂ ಒಂದಾಗಿ, ಚೆಂದಾಗಿ ಕನ್ನಡತನವನ್ನು ಮೆರೆಯಬೇಕು. ತ್ಯಾಗಭಾವದಿಂದ ನಿಷ್ಕಾಮ ಕರ್ಮ ಸಂದಾಯವಾಗಬೇಕು. ಒಟ್ಟಾರೆ ಸರ್ವರ ಸಹಕಾರವೇ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರೀರಕ್ಷೆ ಎಂದು  ಗೋಕಾಕ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಈಟಿ ಅಭಿಪ್ರಾಯಿಸಿದರು.ಇತ್ತೀಚೆಗೆ ಗೋಕಾಕದಲ್ಲಿ ಆಯೋಜಿತವಾದ ಐದನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸಿಂಹಾವಲೋಕನ ಎಂಬ ವಿಷಯದ ಮೇಲೆ ದಂಡಗಿಯವರ ನಿಸರ್ಗ ನಿಲಯದಲ್ಲಿ 283ನೇ ಮಾಸಿಕ ಚಿಂತನ ಕಮ್ಮಟದಲ್ಲಿ ಅತಿಥಿ ಉಪನ್ಯಾಸಕರಾಗಿ ಈಟಿಯವರು ಅರ್ಥಪೂರ್ಣವಾಗಿ ಮಾತನಾಡಿದರು. ಕ.ಸಾ.ಪ. ಅಧ್ಯಕ್ಷರಾದ ಮಹಾಂತೇಶ ತಾಂವಶಿಯವರು ಐದು ವರುಷಗಳ ಕಾಲ ಕನ್ನಡ ತಾಯಿಯ ಸೇವೆ ಸಲ್ಲಿಸಿದುದೊಂದು ಸೌಭಾಗ್ಯವೆಂದರು. 5ನೇ ಸಾಹಿತ್ಯ ಸಮ್ಮೇಳನಕ್ಕೆ ತಮ್ಮನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಡಾ.ಸಿ.ಕೆ. ನಾವಲಗಿಯವರು ಕೃತಜ್ಞತೆ ಸಮರ್ಪಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿಯವರು ನಾಡು, ನುಡಿ, ಸಮಾಜದ ಋಣವನ್ನು ತೀರಿಸುವುದು ಅಸಾಧ್ಯವಾದರೂ ಅಳಿಲು ಸೇವೆಯನ್ನಾದರೂ ಮಾಡಿ ಕೃತಕೃತ್ಯರಾಗಬೇಕೆಂದು ನುಡಿದರು. 

ಇತ್ತೀಚೆಗೆ ನಿಧನರಾದ ಶ್ರೀ ಶಾರದಾ ಸಂಗೀತ ನಾಟಕ ಕಂಪನಿಯ ಹಿರಿಯ ಕಲಾವಿದರಾದ ನಾಗೇಂದ್ರಪ್ಪ ಹೊಸಮನಿ ಹಾಗು ದುರದುಂಡಿಯ ಜಾನಪದ ಕಲಾವಿದರಾದ ಕೆಂಪಣ್ಣ ಹರಿಜನ ಅವರಿಗೆ ಮೌನ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಗುರುಮಾತೆ, ವಾಯ್.ಬಿ. ಕೊಳದೂರ ಪ್ರಾರ್ಥಿಸಿದರು. ಪ್ರೊ. ಶಕುಂತಲಾ ದಂಡಗಿ ಸ್ವಾಗತಿಸಿದರು. ಪ್ರಾಚಾರ್ಯ ಜಯಾನಂದ ಮಾದರ ಅವರು ಸಾಧಕ-ಬಾಧÀಕಗಳನ್ನು ಚರ್ಚಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ಸರ್ವೇಶ್ವರ ಜಾನಪದ ಕಲಾಬಳಗದ ಸಂಚಾಲಕರಾದ ಈಶ್ವರಚಂದ್ರ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಸಾಹಿತಿ ಎಲ್.ಎಸ್.ಚೌರಿ ವಂದಿಸಿದರು.

ಸುದ್ದಿ ಓದಿ