ರಾಣೆಬೆನ್ನೂರ

ಎಸ್‌.ಕೆ. ಡಿ. ಆರಿ​‍್ಡ.ಪಿ ಯೋಜನೆಗಳು ಸದುಪಯೋಗವಾಗಬೇಕು: ಶಿವರಾಯ

ಎಸ್‌.ಕೆ. ಡಿ. ಆರಿ​‍್ಡ.ಪಿ ಯೋಜನೆಗಳು ಸದುಪಯೋಗವಾಗಬೇಕು: ಶಿವರಾಯ

ರಾಣೇಬೆನ್ನೂರು, 24:  ನಗರದ ಕೇಂದ್ರ ಕಚೇರಿ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್‌ ಅಡಿಯಲ್ಲಿ, ತಾಲೂಕಿನ ಹಲಗೇರಿ ಗ್ರಾಮದ ಶ್ರೀ ಹಾಲ ಸಿದ್ದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯಿತು. 

ಸುಜ್ಞಾನನಿಧಿ ಶಿಸ್ಯ ವೇತನ ಮಂಜುರಾತಿ ಪತ್ರವನ್ನು ವಿತರಿಸಿ ಮಾತನಾಡಿದ, ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಅವರು, ಸಮಾಜದಲ್ಲಿ ಇಂದು ಶಿಕ್ಷಣ  ಪರಿಪೂರ್ಣತೆಗಾಗಿ, ಸಮಾಜ, ಸಂಘ ಸಂಸ್ಥೆಗಳು, ಸರಕಾರ ಎಲ್ಲರೂ ಕೈಜೋಡಿಸಬೇಕು ಅದರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಪರಿಪೂರ್ಣತೆ ಹೊಂದಲು ಸಾಧ್ಯವಾಗುವುದು ಎಂದರು. 

ಧರ್ಮಾಧಿಕಾರಿಗಳಾದ ಡಾ: ಡಿ ವೀರೇಂದ್ರ ಹೆಗಡೆಯವರು ಮತ್ತು ಮಾತೃಶ್ರೀ ಡಾ:ಹೇಮಾವತಿ ಹೆಗಡೆ ಅಮ್ಮನವರು, ತಮ್ಮ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಚಿಂತನೆಯೊಂದಿಗೆ ದೂರ ದೃಷ್ಟಿಯಿಂದ ಈ ಶಿಷ್ಯವೇತನ ಕಾರ್ಯಯೋಜನೆಯನ್ನು  ಜಾರಿಗೆ ತಂದಿದ್ದಾರೆ. ಇದರಿಂದಾಗಿ ಶಿಕ್ಷಣ ವಂಚಿತ ಮಕ್ಕಳು, ತಮ್ಮ ಶಿಕ್ಷಣವನ್ನು ಪರಿಪೂರ್ಣವಾಗಿ, ಪೂರ್ಣಗೊಳಿಸಲು ಸಾಧ್ಯವಾಗುತ್ತಲ್ಲಿದೆ ಎಂದರು.   

ಎಸ್ ಕೆ ಡಿ ಆರ್ ಡಿ ಪಿ ಯೋಜನೆ ಅಡಿಯಲ್ಲಿ, ಸ್ವಾಸ್ತ ಸಂಕಲ್ಪ, ಮಧ್ಯವರ್ಜನ ಶಿಬಿರ, ವಾತ್ಸಲ್ಯ,ಉಳಿತಾಯ, ಜಲಮಂಗಲ, ಸಮುದಾಯ ಅಭಿವೃದ್ಧಿ ಯೋಜನೆ,ಸೇರಿದಂತೆ ಸಮಗ್ರ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಕ್ರಿಯಾ ಯೋಜನೆಗಳನ್ನು ಜಾರಿಗೆ ತಂದು, ಆರ್ಥಿಕ ಸಮಾನತೆಗೆ ಸಹಕಾರಿಯಾಗಿದೆ. ಪ್ರಸ್ತುತ ವರ್ಷ ತಾಲೂಕಿನಲ್ಲಿ ಒಟ್ಟು 218 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರು ಶ್ರೀ ಕ್ಷೇತ್ರದ  ಈ ಶಿಷ್ಯವೇತನವನ್ನು ಉಪಯೋಗ ಮಾಡಿಕೊಂಡು, ಸಮಗ್ರ ಶಿಕ್ಷಣ ಪೂರೈಸಿಕೊಳ್ಳಲು  ಮುಂದಾಗಬೇಕು ಎಂದು ಅವರು ಕರೆ ನೀಡಿದರು. 

ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ದೊಡ್ಡ ವೀರಭದ್ರ​‍್ಪ ಮೋಟಗಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ ಮಾಳಗಿ, ಮುಖಂಡ  ಬಸವರಾಜ್ ಕಾಟೇನಹಳ್ಳಿ, ಫಯಾಜ್ ಅಹಮದ್, ಹಸನ್ ಸಾಬ್, ರಾಜಾಸಾಬ್ ಗೋಕನಾಳ,ಒಕ್ಕೂಟದ ಅಧ್ಯಕ್ಷ ಶೈಲಾ ಕನ್ನಪ್ಪಳ್ಳವರ, ಆಫ್ರಿನ್ ಕೌಸರ್ ಜವಳಿ ಮೊದಲಾದವರು ಉಪಸ್ಥಿತರಿದ್ದರು.ತಾಲೂಕ ಯೋಜನಾಧಿಕಾರಿ  ಮಂಜುನಾಥ ಗೌಡ ಎಂ.ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವಿಚಾರಕ ರವಿ ನಿರೂಪಿಸಿ, ,  ಸೇವಾ ಪ್ರತಿನಿಧಿ ಸಲ್ಮಾ ವಂದಿಸಿದರು 


ಸುದ್ದಿ ಓದಿ